ಪೆರ್ಡೂರು: ಪೆರ್ಡೂರು ಗ್ರಾಮದ ಪುತ್ತಿಗೆಯಲ್ಲಿ 27 ವರ್ಷಗಳಿಂದ ಶೈಕ್ಷಣಿಕ, ಧಾರ್ಮಿಕ,ಆರ್ಥಿಕ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರೀಯವಾಗಿವಾಗಿರುವ ಸ್ವರ್ಣ ಫ್ರೆಂಡ್ಸ್ ವತಿಯಿಂದ ಪ್ರಯಾಣಿಕರ ಸುಖಕರ & ಶುಭಕರ ಪ್ರಯಾಣಕ್ಕೆ ಸುಮಾರು 1.50 ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ಸಾರ್ವಜನಿಕ ಬಸ್ಸು ತಂಗುದಾಣ ನಿರ್ಮಿಸಿ ಲೋಕಾರ್ಪಣೆ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶೇಖರ ಕುಲಾಲ್ ವಹಿಸಿದ್ದರು. ಗೌರವಾಧ್ಯಕ್ಷ ಪಿ.ಕೆ ಅಹ್ಮದ್ ಉದ್ಘಾಟಿಸಿ 27 ವರ್ಷಗಳ ಹಿಂದೆ ಹುಟ್ಟು ಹಾಕಿದ ಸಂಸ್ಥೆ ಹೆಮ್ಮರವಾಗಿ ಬೆಳೆದು ಸಕ್ರೀಯವಾಗಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದರು.
ಶ್ರೀ ಗೋಪಾಲಕೃಷ್ಣ ಸನ್ನಿಧಿ ಕಲ್ಲಮಠ ಪುತ್ತಿಗೆ ಇದರ ಅಧ್ಯಕ್ಷ ಪದ್ಮನಾಭ ಭಟ್ ರವರು ದೀಪ ಪ್ರಜ್ವಲಿಸಿ ದೀಪದ ಬೆಳಕಿನಂತೆ ಸಾವಿರಾರು ಜನರ ಬದುಕಿಗೆ ಸಂಸ್ಥೆಯಿಂದ ದಾರಿ ದೀವಿಗೆಯಾಗಿ ಭವಿತವ್ಯದಲ್ಲಿ ಮೂಡಿಬರಲಿಯೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಕದಿಕೆ ಶ್ರೀ ಸಂಜೀವ ಶೆಟ್ಟಿ ಬಹ್ರೈನ್, ದೇವು ಪೂಜಾರಿ ಕೈರು, ಹಮೀದ್ ಸಾಹೇಬ್ (ಉಪ ಸಾಹೇಬರು),ಮಾಜಿ ಅಧ್ಯಕ್ಷ ಮುದ್ದು ಆಚಾರ್ಯ, ಸಂಘದ ಕಾರ್ಯದರ್ಶಿ ಶ್ರೀನಿವಾಸ ಕುಲಾಲ್ ,ಕೋಶಾಧಿಕಾರಿ ಪದ್ಮನಾಭ ನಾಯ್ಕ್, ಮಾಜಿ ಅಧ್ಯಕ್ಷರಾದ ಸದಾನಂದ ಶೆಟ್ಟಿ, ಸುರೇಶ್ ನಾಯ್ಕ್ ಮುಟ್ಟಿಕಲ್ಲು, ಪ್ರಮುಖರಾದ ಅಣ್ಣು ಕುಲಾಲ್, ಜಗದೀಶ ಕುಲಾಲ್, ರಮೇಶ್ ನಾಯ್ಕ ಕದಿಕೆ, ಹರೀಶ್ ನಾಯ್ಕ್, ದಿನೇಶ್ ಸಾಲ್ವಂಕರ್ , ಫಕೀರ್ ಸಾಹೇಬ್, ಶಂಕರ ಪೂಜಾರಿ, ಗೆಳೆಯರ ಬಳಗದ ಸತೀಶ್ ಪೂಜಾರಿ, ಸುನೀಲ್ ನಾಯ್ಕ್, ಶ್ರೀನಿವಾಸ ನಾಯ್ಕ್ ಕದಿಕೆ, ಸುರೇಶ್ ಶೆಟ್ಡಿ ,ಸುರೇಶ್ ನಾಯ್ಕ್, ದಯಾನಂದ ಶೆಟ್ಟಿ,ರಾಜು ಶೆಟ್ಟಿ ಹಾಗೂ ಸಂಘದ ಸರ್ವ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ಶಿಕ್ಷಕ ಹರೀಶ್ ಪೂಜಾರಿ ಎಸ್ ಪ್ರಸ್ತಾವಿಕವಾಗಿ ಮಾತನಾಡಿ ನಿರೂಪಿಸಿ,ಸ್ವಾಗತಿಸಿದರು.















