ಸೆ. 7 ರಂದು ತ್ರೈಮಾಸಿಕ ಅಂಚೆ ಅದಾಲತ್

ಉಡುಪಿ: ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಸೆಪ್ಟಂಬರ್ 7 ರಂದು ಬೆಳಗ್ಗೆ 11 ಗಂಟೆಗೆ ತ್ರೈಮಾಸಿಕಅಂಚೆ ಅದಾಲತ್ ಅನ್ನು ಆಯೋಜಿಸಲಾಗಿದೆ.

ಅಂಚೆ ಗ್ರಾಹಕರು ತಮ್ಮ ದೂರು ಮತ್ತು ಸಲಹೆಗಳನ್ನು ಸೆ. 5 ರ ಮೊದಲು ಅಧೀಕ್ಷಕರ ಕಚೇರಿಗೆ ಕಳುಹಿಸಬಹುದು ಅಥವಾ ಅದಾಲತ್ ನಡೆಯುವ ದಿನದಂದು ಹಾಜರಿದ್ದು, ಸಮಕ್ಷಮ ಚರ್ಚಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.