ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಪರ್ಕಳ ರೂ 2.72 ಕೋಟಿ ಲಾಭ, ಶೇ.18% ಡಿವಿಡೆಂಡ್ ಘೋಷಣೆ

ಪರ್ಕಳ: ಸೊಸೈಟಿಯ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.23 ರಂದು ಆರ್ ಎಸ್ ಬಿ ಸಭಾಭವನ ಮಣಿಪಾಲದಲ್ಲಿ ಸೊಸೈಟಿಯ ಅಧ್ಯಕ್ಷರಾದ ನರಸಿಂಹ ನಾಯಕ್ ಮಣಿಪಾಲ ಇವರ ಅಧ್ಯಕ್ಷತೆಯಲ್ಲಿ ಜರಗಿತು.

2025-2026 ನೇ ಸಾಲಿನ ಅಂತ್ಯಕ್ಕೆ ಸೊಸೈಟಿಯ ಪಾಲು ಬಂಡವಾಳ ರೂ. 2.33 ಕೋಟಿ ನಿಧಿಗಳು ರೂ 16.32 ಕೋಟಿ ಠೇವಣಿ ರೂ 183.25 ಕೋಟಿ ಸಾಲ ಹೊರಬಾಕಿ ರೂ 129.75 ಕೋಟಿ ಯೊಂದಿಗೆ ರೂ 2.72 ಕೋಟಿ ನಿವ್ವಳ ಲಾಭಗಳಿಸಿ, ಲೆಕ್ಕಪರಿಶೋಧನೆಯಲ್ಲಿ “ ಏ” ಶ್ರೇಣಿಯ ಸಹಕಾರ ಸಂಘ ಎಂದು ವರ್ಗೀಕರಿಸಲಾಗಿರುವುದು ಹಾಗೂ ಸದಸ್ಯರಿಗೆ ಶೇ 18% ಪಾಲು ಮುನಾಫೆ ನೀಡುವುದು ಎಂದು ಘೋಷಿಸಲಾಯಿತು.

ಸೊಸೈಟಿಯ ವಾರ್ಷಿಕ ವರದಿ, ಲೆಕ್ಕಪತ್ರ, ನಿವ್ವಳ ಲಾಭದ ವಿಂಗಡಣೆ, ಆಯವ್ಯಯ, ಮುಂದಿನ ವರ್ಷದ ಕಾರ್ಯ ಯೋಜನೆಗಳನ್ನು ಮುಖ್ಯಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ನರಸಿಂಗೆ ಯವರು ಮಂಡಿಸಿದರು.

ಅಧ್ಯಕ್ಷೀಯ ಭಾಷಣದಲ್ಲಿ ಸೊಸೈಟಿಯ ಅಧ್ಯಕ್ಷರಾದ ನರಸಿಂಹ ನಾಯಕ್ ಮಣಿಪಾಲ ಅವರು ಮಾತನಾಡಿ ಪ್ರಸ್ತುತ ಸೊಸೈಟಿಯ ಠೇವಣಿ ರೂ 197 ಕೋಟಿಗೂ ಮೀರಿದ್ದು ಮುಂದಿನ ವರ್ಷದ ಅಂತ್ಯಕ್ಕೆ ಸಂಸ್ಥೆಯ ಠೇವಣಿ ರೂ 225 ಕೋಟಿ ಗುರಿ, ರೂ 3 ಕೋಟಿಗೂ ಮಿಗಿಲಾದ ಲಾಭ ಗಳಿಸಿ ಕಾರ್ಯ ಕ್ಷೇತ್ರದಲ್ಲಿ ನೂತನ ಶಾಖೆ ತೆರೆಯಲು ಯೋಜನೆ ರೂಪಿಸಿರುತ್ತೇವೆ, ಇದಲ್ಲದೆ ಈ ವರ್ಷ 2026-27 ರಲ್ಲಿ ಸೊಸೈಟಿಗೆ “ಸಾಧನಾ ಪ್ರಶಸ್ತಿ “ ಮತ್ತು ಶ್ರೇಷ್ಠ ಸಹಕಾರ ಮಿತ್ರ ಎಂಬ 2 ಪ್ರಶಸ್ತಿಗಳು ಈಗಾಗಲೇ ಲಭಿಸಿದ್ದು ಸಂಸ್ಥೆಯ ಸಾಧನೆಯ ದ್ಯೋತಕವಾಗಿದೆ ಎಂದು ನುಡಿಯುತ್ತಾ ಸೊಸೈಟಿಯ ಮುಂದಿನ ಅಭಿವೃದ್ಧಿಗೆ ಸದಸ್ಯರ ಸಹಕಾರ ಯಾಚಿಸಿದರು.

ಈ ಸಂದರ್ಭ ಏ ವರ್ಗದ ಸದಸ್ಯರ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಶೇ 80 ಯಾ ಅಧಿಕ ಅಂಕಗಳಿಸಿದ 98 ವಿದ್ಯಾರ್ಥಿಗಳಿಗೆ ಒಟ್ಟು ರೂ .4 ಲಕ್ಷ ವಿದ್ಯಾರ್ಥಿ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.

ಸಮಾರಂಭದಲ್ಲಿ ಸೊಸೈಟಿಯ ಉಪಾಧ್ಯಕ್ಷ ಮಹೇಶ್ ನಾಯಕ್ ಅಂಬಲಬೆಟ್ಟು , ನಿರ್ದೇಶಕರುಗಳಾದ ರಾಮಕೃಷ್ಣ ನಾಯಕ್ ಬಿ ಪರ್ಕಳ , ವಿಜೇತ್ ಕುಮಾರ್ ಬೆಳ್ಳರ್ಪಾಡಿ, ಅಶೋಕ್ ಕಾಮತ್ ಕೊಡಂಗೆ, ಸದಾನಂದ ಎನ್ ನಾಯಕ್ ಹೆರ್ಗ, ಗಣಪತಿ ಪ್ರಭು ಕುಕ್ಕೆಹಳ್ಳಿ, ಸುದರ್ಶನ ನಾಯಕ್ ಭೈರಂಜೆ, ಶಶಿಧರ ವಾಗ್ಳೆ ಬಂಟಕಲ್ಲು, ಶ್ರೀಕಾಂತ್ ನಾಯಕ್ ಕರ್ವಾಲು, ಶ್ರೀಮತಿ ರೂಪಾ ನಾಯಕ್ ಪರ್ಕಳ, ಶ್ರೀಮತಿ ಜಯಂತಿ ನಾಯಕ್ ಪರ್ಕಳ, ಪಾಂಡುರಂಗ ಕಾಮತ್ ಎಸ್ ಪರ್ಕಳ, ಶ್ರೀಮತಿ ಭಾರತಿ ಆರ್ ನಾಯಕ್ ಮಾಣಿಬೆಟ್ಟು ವೇದಿಕೆ ಮೇಲೆ ಉಪಸ್ಥಿತರಿದ್ದರು. ಉಪಾಧ್ಯಕ್ಷರು ಸ್ವಾಗತಿಸಿ, ವಾಸುದೇವ ಪ್ರಭು ಅಲೆವೂರು ನಿರೂಪಿಸಿ, ಗಣಪತಿ ಪ್ರಭು ವಂದಿಸಿದರು.