ಮಣಿಪಾಲದ MSDC ಯಲ್ಲಿದೆ CNC ಮೆಷಿನ್ ತರಬೇತಿ ಕಾರ್ಯಕ್ರಮ: ಈ ಅಲ್ಪಾವಧಿ ತರಬೇತಿ ನಿಮಗೆ ಬದುಕು ಕಟ್ಟಿಕೊಡುತ್ತೆ!

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ಯುವಜನರಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿಗೆ ಅನುಕೂಲವಾಗುವಂತೆ CNC ಮೆಷಿನ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಲ್ಪಾವಧಿಯ ತರಬೇತಿ ಕಾರ್ಯಕ್ರಮವಾಗಿರುವ ಇದರಲ್ಲಿ CNC ಲೇಥ್ ಮತ್ತು ಮಿಲ್ಲಿಂಗ್ ಯಂತ್ರಗಳ ಆರ್ಕಿಟೆಕ್ಚರ್, CNC ವರ್ಕ್‌ಫ್ಲೋ ಮತ್ತು ಕಾರ್ಯಾಚರಣೆ, CNC ಪ್ರೋಗ್ರಾಮಿಂಗ್‌ನ ಮೂಲಭೂತ ಅಂಶಗಳು, ಸುರಕ್ಷತಾ ಕ್ರಮಗಳು ಹಾಗೂ ಲ್ಯಾಬ್ ಶಿಸ್ತು ಕುರಿತು ತರಬೇತಿ ನೀಡಲಾಗುತ್ತದೆ. ಅಲ್ಲದೆ, CNC ಲೇಥ್ ಮತ್ತು ಮಿಲ್ ಯಂತ್ರಗಳಲ್ಲಿ ಪ್ರಾಯೋಗಿಕ ತರಬೇತಿಗೂ ಅವಕಾಶ ಕಲ್ಪಿಸಲಾಗಿದೆ.

ತರಬೇತಿಯು ಪ್ರಾಯೋಗಿಕ ಕಲಿಕೆ, ಕೈಗಾರಿಕಾ ಆಧಾರಿತ ತರಬೇತಿ, ತಜ್ಞರ ಮಾರ್ಗದರ್ಶನ ಹಾಗೂ ನೈಜ ಯಂತ್ರಗಳ ಅನುಭವಕ್ಕೆ ಆದ್ಯತೆ ನೀಡಲಿದೆ.

ಕೌಶಲ್ಯಾಧಾರಿತ ಈ ತರಬೇತಿ ಕಾರ್ಯಕ್ರಮವು CNC ಯಂತ್ರೋಪಕರಣ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಅಗತ್ಯವಾದ ಮೂಲಭೂತ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸುವ ಉದ್ದೇಶ ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ 81231 65069 / 73497 80582 ಸಂಪರ್ಕಿಸಬಹುದು. MSDC ಕೇಂದ್ರವು ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಈಶ್ವರನಗರ, ಮಣಿಪಾಲ, ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.