ರಕ್ಷಾ ಬಂಧನದ ಪ್ರಯುಕ್ತ ಉಡುಪಿಯ ಸಿದ್ಧಿ ಕ್ರಿಯೇಟಿವ್ ಸ್ಕಿಲ್ಸ್ ಅಕಾಡೆಮಿ ವತಿಯಿಂದ ಆಗಸ್ಟ್ 23ರಂದು ಹ್ಯಾಂಡ್ಮೇಡ್ ರಾಖಿ ಕ್ರಿಯೇಟಿವ್ ವರ್ಕ್ಶಾಪ್ ಹಾಗೂ ರಾಖಿ ತಯಾರಿಕಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ವಿವಿಧ ಮಾದರಿಯ ಸುಂದರವಾದ ರಾಖಿ ತಯಾರಿಕೆ, ಟಸೆಲ್ ಹಾಗೂ ಅಲಂಕಾರಿಕ ವಸ್ತುಗಳ ಬಳಕೆ ಮತ್ತು ಗಿಫ್ಟ್ ಪ್ಯಾಕಿಂಗ್ ಸೇರಿದಂತೆ ಹಲವು ಸೃಜನಾತ್ಮಕ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಸಲಾಗುವುದು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ “Best & Most Creative Rakhi” ಎಂಬ ವಿಷಯದಡಿ ರಾಖಿ ತಯಾರಿಕಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಗುವುದು. ಭಾಗವಹಿಸುವ ಎಲ್ಲಾ ಸ್ಪರ್ಧಾರ್ಥಿಗಳಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುವುದು.
“ಸ್ವತಃ ರಾಖಿ ತಯಾರಿಸಿ, ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸುವುದರ ಜೊತೆಗೆ, ಈ ಕೌಶಲ್ಯವನ್ನು ಸಣ್ಣ ಉದ್ಯಮವಾಗಿ ಬೆಳೆಸಿ ಆದಾಯ ಗಳಿಸಬಹುದು” ಎಂಬ ಉದ್ದೇಶದಿಂದ ಈ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಮೂಲಕ ಮಹಿಳೆಯರು ಮತ್ತು ಮಕ್ಕಳಿಗಾಗಿ ಸೃಜನಶೀಲ ಕೌಶಲ್ಯಗಳನ್ನು ಕಲಿಸುವುದರ ಜೊತೆಗೆ, ಅವುಗಳನ್ನು ಉದ್ಯಮವಾಗಿ ರೂಪಿಸಿಕೊಳ್ಳಲು ಅಗತ್ಯವಾದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಲಾಗುವುದು.















