ಮಂಗಳೂರು: ಪೌರತ್ವ ಕಾಯ್ದೆ ಜಾರಿಗೆ ಬಂದ್ರೆ ಕರ್ನಾಟಕ ಕೂಡ ಹೊತ್ತಿ ಉರಿಯಲು ದಿವಸಗಳಿಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ಎಚ್ಚರಿಕೆ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಈ ಕಾಯಿದೆ ಅನುಷ್ಠಾನ ಮಾಡ್ತಾರೆ ಎಂಬುದಾಗಿ ಕೇಳಿಬಂದಿದೆ.
ಈ ಕಾಯಿದೆ ಅನುಷ್ಠಾನದಿಂದ ಇಡೀ ದೇಶ ಹೊತ್ತಿ ಉರಿಯುತ್ತಿದೆ. ಆದರೆ ಭಾರತದ ಕರ್ನಾಟಕದಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆ ತಾಳ್ಮೆಯಿಂದ ಇದ್ದಾರೆ. ಈ ರಾಜ್ಯದ ಮುಖ್ಯಮಂತ್ರಿಗೆ ಒಂದು ಸಲಹೆ ಸೂಚನೆ ಎಚ್ಚರಿಕೆ ನೀಡ್ತಿದ್ದೇವೆ. ಈ ಕಾಯಿದೆ ಕರ್ನಾಟಕದಲ್ಲಿ ಜಾರಿ ತರುವ ಯೋಚನೆ ಮಾಡಿದರೆ ಕರ್ನಾಟಕ ಕೂಡಾ ಹೊತ್ತಿ ಉರಿಳಯಲು ದಿವಸಗಳಿಲ್ಲ ಖಾದರ್ ಎಚ್ಚರಿಕೆ ನೀಡಿದ್ದಾರೆ.