ಉಡುಪಿ: ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಇಟಿ, ನೀಟ್, ಜೆಇಇ ಮೇನ್ಸ್, ಕಾಮರ್ಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ, ತರಬೇತಿ ನೀಡುತ್ತಿರುವ ಆಚಾರ್ಯ ಏಸ್ ಸಂಸ್ಥೆಯಿಂದ ಪ್ರೌಢಶಾಲೆ ಮತ್ತು ಪಿಯುಸಿ ತರಗತಿಗಳಿಗೆ ಸಂಬಂಧಿಸಿದ ವೇಕೇಶನ್ ಬ್ಯಾಚ್ ಫೆ.25ರಿಂದ ಪ್ರಾರಂಭವಾಗಲಿದೆ. ವಿದ್ಯಾರ್ಥಿಗಳ ವಾರ್ಷಿಕ ರಜಾದಿನಗಳಲ್ಲಿ ಈ ತರಬೇತಿ ಜರಗಲಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಲಿದೆ.
ಯಾವಾಗ ತರಗತಿ?
ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ತರಬೇತಿ ಫೆ. 25ರಿಂದ ಆರಂಭವಾಗಿ ಮೇ ತಿಂಗಳವರೆಗೆ ಜರಗಲಿದೆ. ಹಾಗೆಯೇ ಜೆಇಇ ಮತ್ತು ನೀಟ್ ತರಗತಿಯು ಮಾರ್ಚ್ ಮೊದಲ ವಾರದಿಂದ ಕಾಲೇಜು ಆರಂಭವಾಗುವವರೆಗೂ ಪ್ರತಿದಿನ ಸಾಯಂಕಾಲ 4:30 ರಿಂದ 6.30 ರವರೆಗೆ ಮತ್ತು ಕಾಲೇಜು ಆರಂಭವಾದ ಬಳಿಕ ಶನಿವಾರ ಸಂಜೆ ಹಾಗೂ ರವಿವಾರ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಜರಗಲಿದೆ. ಈ ತರಬೇತಿ 2021 ಮಾರ್ಚ್ ತನಕ ತರಬೇತಿ ಜರಗಲಿದೆ.
ಪ್ರೌಢಶಾಲೆಗೆ ವೆಕೇಶನ್ ಬ್ಯಾಚ್:
8ನೇ ತರಗತಿ ಪೂರೈಸಿ 9ನೇ ತರಗತಿಗೆ ಮತ್ತು 9ನೇ ತರಗತಿ ಪೂರೈಸಿ 10ನೇ ತರಗತಿಗೆ ಪ್ರವೇಶಿಸುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿಯು ಏಪ್ರಿಲ್ 1ರಿಂದ ಆರಂಭವಾಗಿ ಮೇ ಮೂರನೇ ವಾರದವರೆಗೆ ಜರಗಲಿದೆ.
ಶಾಲೆ ಆರಂಭವಾದ ಆನಂತರ 2021 ಮಾರ್ಚ್ ವರೆಗೆ ಪ್ರತಿ ರವಿವಾರ ಜರಗಲಿದೆ. ಪ್ರತಿಭಾನ್ವಿತ ಪ್ರಾಧ್ಯಾಪಕ ವೃಂದದಿಂದ ಈ ತರಬೇತಿಯು ಆಯೋಜನೆಗೊಂಡಿದ್ದು, ವಿದ್ಯಾರ್ಥಿಗಳಿಗೆ ಉಪನ್ಯಾಸದ ಜತೆಗೆ ಸಂಪನ್ಮೂಲ ವ್ಯಕ್ತಿಗಳಿಂದ ರಚಿತವಾದ ಪಠ್ಯಪುಸ್ತಕ ನೀಡಲಾಗುವುದು ಈ ತರಬೇತಿಯ ವಿಶೇಷ.
ಸಿಇಟಿ, ಜೆಇಇ, ನೀಟ್ ಕ್ರಾಶ್ ಕೋರ್ಸ್:
2020 ರ ಏಪ್ರಿಲ್ನಲ್ಲಿ ಸಿಇಟಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಸಿಇಟಿ ಕ್ರಾಸ್ ಕೋರ್ಸ್ ತರಬೇತಿಯು ಮಾರ್ಚ್ 20ರಂದು ಆರಂಭವಾಗಿ 30 ದಿನಗಳ ಕಾಲ ನಿರಂತರವಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ಜರಗಲಿದೆ.
ಮಾದರಿ ಪರೀಕ್ಷೆ ವಿಶೇಷ ಕಾರ್ಯಾಗಾರ:
ಇನ್ನು ಸಂಸ್ಥೆಯ ವತಿಯಿಂದ ಸಿಇಟಿ ವಿದ್ಯಾರ್ಥಿಗಳಿಗೆ ಸಿಇಟಿಯ ಪಠ್ಯಪುಸ್ತಕ ಹಾಗೂ ಪ್ರಶ್ನೋತ್ತರ ಕೃತಿಗಳನ್ನು ಉಚಿತವಾಗಿ ನೀಡಲಾಗುವುದು.
ಅಲ್ಲದೆ ನಿರಂತರ ಮಾದರಿ ಪರೀಕ್ಷೆಗಳನ್ನು ಹಾಗೂ ವಿಶೇಷ ಕಾರ್ಯಗಾರಗಳನ್ನು ಆಯೋಜಿಸಲಾಗುತ್ತದೆ. ಜೆಇಇ,ನೀಟ್ ಮತ್ತು ಸಿಇಟಿ ಕ್ರಾಸ್ ಕೋರ್ಸ್ ಹೊರತು ಉಳಿದ ತರಬೇತಿಗಳು 2021ರ ಮಾರ್ಚ್ ವರೆಗೆ ನಡೆಯಲಿದೆ.
2018-19ರ ಆಚಾರ್ಯ ಏಸ್ ನಿಂದ ತರಬೇತಿ ಪಡೆದ 152 ವಿದ್ಯಾರ್ಥಿಗಳು ಪ್ರಸಿದ್ಧ ಇಂಜಿನಿಯರಿಂಗ್ ಕಾಲೇಜು ಹಾಗೆಯೇ 37 ವಿದ್ಯಾರ್ಥಿಗಳು ವೈದ್ಯಕೀಯ ಅಧ್ಯಯನಕ್ಕೆ ಆಯ್ಕೆಗೊಂಡಿರುವುದು ಉಡುಪಿ ತರಬೇತಿ ಸಂಸ್ಥೆಯ ಇತಿಹಾಸದಲ್ಲಿ ನೂತನ ದಾಖಲೆಯಾಗಿದೆ.
ಆಸಕ್ತರು ಕೂಡಲೇ ಸಂಪರ್ಕಿಸಿ:
ಆಸಕ್ತ ವಿದ್ಯಾರ್ಥಿಗಳು ಉಡುಪಿ ತೆಂಕುಪೇಟೆ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯದ ಮುಂಭಾಗದಲ್ಲಿರುವ ಆಚಾರ್ಯ ಏಸ್ ಹಾಗೂ ಬ್ರಹ್ಮಾವರದ ಎಸ್.ಎಂ.ಎಸ್ ಚರ್ಚ್ ನ ಮುಂಭಾಗದಲ್ಲಿರುವ ಮಧುವನ್ ಕಾಂಪ್ಲೆಕ್ಸ್ ನ ಮೊದಲ ಮಹಡಿಯ ಏಸ್ ಸಂಸ್ಥೆಯನ್ನು ಸಂಪರ್ಕಿಸಬೇಕೆಂದು ಸಂಸ್ಥೆಯ ಪಿ. ಲಾತವ್ಯ ಆಚಾರ್ಯ ಹಾಗೂ ಬ್ರಹ್ಮಾವರ ಸಂಸ್ಥೆಯ ನಿರ್ದೇಶಕ ಅಕ್ಷೋಭ್ಯ ಆಚಾರ್ಯ ತಿಳಿಸಿದ್ದಾರೆ.