ಮಣಿಪಾಲ: ಡ್ರೋನ್ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ ರೂಪಿಸಿಕೊಳ್ಳಲು ಆಸಕ್ತರಿಗೆ ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ಡ್ರೋನ್ ಪೈಲಟ್ ಲೈಸೆನ್ಸ್ ತರಬೇತಿ ಕೋರ್ಸ್‌ನ್ನು ಪರಿಚಯಿಸಲಾಗಿದೆ.
DGCA ಮಾರ್ಗಸೂಚಿಗಳಿಗೆ ಅನುಗುಣವಾಗಿ ತರಬೇತಿ ನೀಡಲಾಗುತ್ತಿದ್ದು, ಆರಂಭಿಕ ಹಂತದ ಅಭ್ಯರ್ಥಿಗಳಿಗೂ ಕೋರ್ಸ್ ಸೂಕ್ತವಾಗಿದೆ. ಪ್ರಮಾಣೀಕೃತ ತರಬೇತಿ ಹಾಗೂ ವೃತ್ತಿಪರ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗಿದೆ.
ಡ್ರೋನ್ ಪೈಲಟ್ ತರಬೇತಿ ಪಡೆದ ಬಳಿಕ ವೀಡಿಯೋಗ್ರಫಿ, ಛಾಯಾಗ್ರಹಣ, ಕೃಷಿ ಕ್ಷೇತ್ರದಲ್ಲಿ ಡ್ರೋನ್ ಬಳಕೆ, ಸರ್ವೇಯಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯವನ್ನು ಬಳಸಿಕೊಳ್ಳಬಹುದಾಗಿದೆ. ಡ್ರೋನ್ ಬಾಡಿಗೆ ಸೇವೆಗಳಲ್ಲಿಯೂ ಈ ತರಬೇತಿ ಉಪಯುಕ್ತವಾಗಲಿದೆ.
ಡ್ರೋನ್ ತಂತ್ರಜ್ಞಾನಕ್ಕೆ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಈ ತರಬೇತಿ ಕೋರ್ಸ್ ಯುವಜನರಿಗೆ ಹೊಸ ವೃತ್ತಿ ಅವಕಾಶಗಳನ್ನು ಕಲ್ಪಿಸುವ ಉದ್ದೇಶ ಹೊಂದಿದೆ.
ತರಬೇತಿ ಹಾಗೂ ಪ್ರವೇಶಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ MSDC, ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಈಶ್ವರನಗರ, ಮಣಿಪಾಲ–576104ಕ್ಕೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ 8123165069 ಸಂಖ್ಯೆಗೆ ಕರೆ ಮಾಡಬಹುದು. ವೆಬ್‌ಸೈಟ್: www.msdckskills.org.















