ಕಾಪು ಹೊಸಮಾರಿಗುಡಿ ಕಚೇರಿ ನಿರ್ವಾಹಕ ಸಂತೋಷ್ ಶೆಟ್ಟಿ ನಿಧನ

ಉಡುಪಿ: ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಕಚೇರಿ ನಿರ್ವಾಹಕ ಹಾಗೂ ಸಾಯಿ ಕ್ಯಾಟರರ್ಸ್‌ ಮಾಲೀಕ ಸಂತೋಷ್ ಶೆಟ್ಟಿ ಗುರ್ಮೆ ಕಳತ್ತೂರು ಸಂತೋಷ್ ಶೆಟ್ಟಿ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.
ಅವರು ಪತ್ನಿ, ಪುತ್ರ, ಕುಟುಂಬಸ್ಥರು ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ. ಸಂತೋಷ್ ಶೆಟ್ಟಿ ಅವರು ಕಳೆದ 32 ವರ್ಷಗಳಿಂದ ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ನಿಧನಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿ ಹಾಗೂ ಸಿಬ್ಬಂದಿ ವರ್ಗ ಸಂತಾಪ ವ್ಯಕ್ತಪಡಿಸಿದೆ.