ಮರೋಳಿ ವಾರ್ಡ್ ಅಭಿವೃದ್ಧಿಗೆ 2.19 ಕೋ.ರೂ. ಅನುದಾನ ಬಿಡುಗಡೆ: ಶಾಸಕ ಕಾಮತ್       

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮರೋಳಿ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗೆ 2.19 ಕೋಟಿ ಅನುದಾನ ಬಿಡುಗಡೆಗೊಳಿಸಿರುವುದಾಗಿ ಶಾಸಕ ಡಿ. ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಿಂದ 58 ಲಕ್ಷ ರೂ. ಬಿಡುಗಡೆಯಾಗಿದ್ದು, ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿಯ ಎದುರಿನ ರಸ್ತೆಗೆ ಡಾಮರೀಕರಣ ಕ್ಕೆ 50 ಲಕ್ಷ, ಉಜ್ಜೋಡಿ ಪ್ರೇಮ್ ನಗರದಲ್ಲಿ ಕಾಲು ಸಂಕ ಪುನರ್ನಿರ್ಮಾಣಕ್ಕೆ 8 ಲಕ್ಷ ಮೀಸಲಿಡಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಮಳೆಹಾನಿ ಪರಿಹಾರ ನಿಧಿಯಲ್ಲಿ 27 ಲಕ್ಷ ಬಿಡುಗಡೆಗೊಳಿಸಲಾಗಿದೆ. ಜಯನಗರ ಮುಖ್ಯ ರಸ್ತೆಯ ಬಳಿ ಮುಚ್ಚುಗುಂಡಿ ರಚನೆ ಕಾಮಗಾರಿ 2.50 ಲಕ್ಷ, ಬಜ್ಜೋಡಿ ಬಿಕರ್ನಕಟ್ಟೆ ಬಳಿ ತಡೆಗೋಡೆ ದುರಸ್ತಿ 5 ಲಕ್ಷ, ಬಜ್ಜೋಡಿ ಬಳಿ ತೋಡಿಗೆ ತಡೆಗೋಡೆ ನಿರ್ಮಾಣ ಹಾಗೂ ರಸ್ತೆ ದುರಸ್ತಿ ಕಾಮಗಾರಿ 5 ಲಕ್ಷ, ಮರೋಳಿ ಕನಪತಗ್ಗು ಚಾಮುಂಡೇಶ್ವರಿ ಮಂದಿರದ ಬಳಿ ತಡೆಗೋಡೆ ದುರಸ್ತಿ ಕಾಮಗಾರಿಗೆ 5 ಲಕ್ಷ, ಬಿಕರ್ನಕಟ್ಟೆ ಬಜ್ಜೋಡಿಯಲ್ಲಿ ತಡೆಗೋಡೆ ನಿರ್ಮಾಣ 5 ಲಕ್ಷ, ಮರೋಳಿ ಬಳಿ ತೋಡು ದುರಸ್ತಿ ಕಾಮಗಾರಿ 5 ಲಕ್ಷ ಅನುದಾನ ಒದಗಿಸಲಾಗಿದೆ ಎಂದಿದ್ದಾರೆ.
ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 74.5 ಲಕ್ಷ ಅನುದಾನ ಬಿಡುಗಡೆಯಾಗಿದೆ. ಮರೋಳಿ ಜೋಡುಕಟ್ಟೆ ಬಯಲು ರಂಗ ಮಂದಿರ ನಿರ್ಮಾಣದ ಮುಂದುವರೆದ ಕಾಮಗಾರಿಗೆ 25 ಲಕ್ಷ, ಬಜ್ಜೋಡಿ ಮುಖ್ಯ ರಸ್ತೆಯಲ್ಲಿ ಚರಂಡಿ ಹಾಗೂ ಮೋರಿ ರಚನೆ 5 ಲಕ್ಷ, ಬಜ್ಜೋಡಿ ಮುಖ್ಯ ರಸ್ತೆಯಲ್ಲಿ ಒಳಚರಂಡಿ ರಚನೆ ಕಾಮಗಾರಿಗೆ 5 ಲಕ್ಷ, ಬಜ್ಜೋಡಿ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿ 15 ಲಕ್ಷ, ಅಡು ಮರೋಳಿ ಮಾರಿಕಾಂಬಾ ದೇವಸ್ಥಾನದ ಬಳಿ ತಡೆಗೋಡೆ ರಚನೆ ಕಾಮಗಾರಿ 5 ಲಕ್ಷ, ಸೂರ್ಯನಾರಾಯಣ ದೇವಸ್ಥಾನದ ಮುಂಬಾಗದ ಮನೆಯ ಎದುರು ಚರಂಡಿ ಹಾಗೂ ಮೋರಿ ರಚನೆ ಕಾಮಗಾರಿ 5 ಲಕ್ಷ, ಮರೋಳಿ ಭಾರತ್ ಪ್ರಿಂಟರ್ಸ್ ಎದುರು ರೇಗೋ ಭಾಗ್ ಅಡ್ಡ ರಸ್ತೆಯ ಕಾಂಕ್ರೀಟೀಕರಣ ಹಾಗೂ ಚರಂಡಿ ರಚನೆ 5 ಲಕ್ಷ, ಜಯನಗರ 4 ನೇ ಅಡ್ಡ ರಸ್ತೆಯ ಬಳಿ ಒಳ ಚರಂಡಿ ಅಭಿವೃದ್ಧಿ ಕಾಮಗಾರಿ 4.38 ಲಕ್ಷ, ಜಯನಗರ 4ನೇ ಅಡ್ಡರಸ್ತೆಯ  ಕಾಮಗಾರಿಗೆ 4.67 ಲಕ್ಷ ಅನುದಾನ ನೀಡಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ನಿಧಿಯಿಂದ 14.80 ಲಕ್ಷ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ಬಜ್ಜೋಡಿ ಬಳಿ ರಸ್ತೆ ಕಾಂಕ್ರೀಟೀಕರಣ 5 ಲಕ್ಷ, ಕನಪತಗ್ಗು ರಸ್ತೆಯ ಚಾಮುಂಡೇಶ್ವರಿ ದೇವಸ್ಥಾನದ ಬಳಿ ತಡೆಗೋಡೆ ರಚನೆ ಹಾಗೂ ಅಭಿವೃದ್ಧಿ ಕಾಮಗಾರಿ 5 ಲಕ್ಷ, ಬಜ್ಜೋಡಿ, ತಾತವ್ ರಸ್ತೆ, ಜಯನಗರ ಅಡ್ಡರಸ್ತೆಗಳಲ್ಲಿ ಕುಡಿಯುವ ನೀರಿನ ಪೂರೈಕೆ ಅಭಿವೃದ್ಧಿಗೆ ಹೊಸ ಎಚ್‌ಡಿಪಿಇ ಕೊಳವೆ ಅಳವಡಿಕೆ ಕಾಮಗಾರಿ 4.80 ಲಕ್ಷ ಮೀಸಲಿಡಲಾಗಿದೆ.
ಕೇಂದ್ರ ಸರಕಾರದ 14ನೇ ಹಣಕಾಸು ಅನುದಾನ ವ್ಯವಸ್ಥೆಯಲ್ಲಿ 20 ಲಕ್ಷ ಬಿಡುಗಡೆಯಾಗಿದ್ದು, ಮರೋಳಿ ಜಯನಗರ 4ನೇ ಅಡ್ಡರಸ್ತೆಯ ಅಭಿವೃದ್ಧಿಗೆ ಮೀಸಲಿಡಲಾಗಿದೆ.
ಮಲೆನಾಡು ಅಭಿವೃದ್ಧಿ ಪ್ರಾಧಿಕಾರದಿಂದ 10 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಅಡುಮರೋಳಿ ದೈವಸ್ಥಾನದ ಹತ್ತಿರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅದನ್ನು ವಿನಿಯೋಗಿಸಲಾಗುವುದು. ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ 15 ಲಕ್ಷ ಬಿಡುಗಡೆಯಾಗಿದ್ದು  ಮರೋಳಿ ಗ್ರಾಮದ ಆಡು ಎಂಬಲ್ಲಿ ತೋಡು ಅಭಿವೃದ್ಧಿ ಕಾಮಗಾರಿಗೆ ಮೀಸಲಿಡಲಾಗಿದೆ ಎಂದಿದ್ದಾರೆ.