ಮಣಿಪಾಲ: ಮಕ್ಕಳ ಫ್ರಾಕ್ ವಿನ್ಯಾಸ, ಪ್ಯಾಟರ್ನ್ ತಯಾರಿ ಹಾಗೂ ಹೊಲಿಗೆ ತಂತ್ರಗಳನ್ನು ಕಲಿಯಲು ಆಸಕ್ತರಿಗಾಗಿ ಮಣಿಪಾಲದ MSDCಯಲ್ಲಿ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ. ಈ ಕಾರ್ಯಾಗಾರವು ಆಗಸ್ಟ್ 19ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಮಣಿಪಾಲದ Dreamzone, MSDC, 2ನೇ ಮಹಡಿ, ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್ನಲ್ಲಿ ನಡೆಯಲಿದೆ.
‘Designer Kid’s Frock Workshop’ ಹೆಸರಿನಲ್ಲಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಆರಂಭಿಕ ಹಂತದ ಕಲಿಕಾರ್ಥಿಗಳಿಗೆ ಸೂಕ್ತವಾಗಿರುವ ಈ ಕಾರ್ಯಾಗಾರಕ್ಕೆ ಎಲ್ಲ ವಯೋಮಾನದವರು ಭಾಗವಹಿಸಬಹುದಾಗಿದೆ.
ಏನೇನು ಕಲಿಯಬಹುದು?
ಕಾರ್ಯಾಗಾರದಲ್ಲಿ ಮಕ್ಕಳ ಫ್ರಾಕ್ ಪ್ಯಾಟರ್ನ್ ತಯಾರಿಕೆಯ ಮೂಲಭೂತ ಅಂಶಗಳು, ಸರಳ ಫ್ರಾಕ್ ಪ್ಯಾಟರ್ನ್ ರೂಪಿಸುವ ವಿಧಾನ ಹಾಗೂ ಹೊಲಿಗೆ ತಂತ್ರಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಲೈವ್ ಡೆಮೋ ಮೂಲಕ ಹೊಲಿಗೆ ವಿಧಾನಗಳನ್ನು ತಿಳಿಸಿಕೊಡುವುದರ ಜೊತೆಗೆ, ಆತ್ಮವಿಶ್ವಾಸದಿಂದ ಮಕ್ಕಳ ಫ್ರಾಕ್ ಹೊಲಿಯುವ ಕೌಶಲ್ಯ ಮತ್ತು ಗಾರ್ಮೆಂಟ್ ವಿನ್ಯಾಸದ ಸೃಜನಶೀಲತೆಯನ್ನು ಅಭಿವೃದ್ಧಿಪಡಿಸಲು ತರಬೇತಿ ನೀಡಲಾಗುತ್ತದೆ.
ಕಾರ್ಯಾಗಾರಕ್ಕೆ ನೋಂದಣಿ ಶುಲ್ಕವಾಗಿ ₹199 ನಿಗದಿಪಡಿಸಲಾಗಿದೆ. ಆಸಕ್ತರು ಪೋಸ್ಟರ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಹೊಲಿಗೆ ಹಾಗೂ ಉಡುಪು ವಿನ್ಯಾಸದಲ್ಲಿ ಆಸಕ್ತಿ ಹೊಂದಿರುವವರು ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.















