ಜಪಾನೀಸ್ ಕಲಿತರೆ ಜಾಗತಿಕ ಮಟ್ಟದಲ್ಲೂ ಉದ್ಯೋಗಾವಕಾಶ : MSDCಯಲ್ಲಿದೆ ಜಪಾನೀಸ್ ಭಾಷೆಯ ಕೋರ್ಸ್‌, ಪಡೆಯಿರಿ ಸ್ವಾತಂತ್ರ್ಯೋತ್ಸವದ ಆಫರ್

ಮಣಿಪಾಲ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ಜಪಾನೀಸ್ ಭಾಷೆಯ N5 ಹಂತದ ಕೋರ್ಸ್‌ಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ.

ಜಪಾನ್‌ನಲ್ಲಿ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳನ್ನು ಪಡೆಯಲು ಆಸಕ್ತಿ ಹೊಂದಿರುವವರಿಗೆ ಅನುಕೂಲವಾಗುವಂತೆ ಈ ವಿಶೇಷ ಆಫರ್ ನೀಡಲಾಗಿದ್ದು, ಆಗಸ್ಟ್ 15, 2026ರವರೆಗೆ ನೋಂದಣಿಗೆ ಅವಕಾಶವಿದೆ.

ಸಾಮಾನ್ಯವಾಗಿ ₹20,000 ಶುಲ್ಕವಿರುವ ಕೋರ್ಸ್‌ಗೆ MSDC ಸಿಬ್ಬಂದಿ, ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಸಿಬ್ಬಂದಿ, MAHE ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಅರ್ಹರಿಗೆ 50ರಷ್ಟು ರಿಯಾಯಿತಿಯೊಂದಿಗೆ ₹10,000ಕ್ಕೆ ಕೋರ್ಸ್ ಪಡೆಯಬಹುದಾಗಿದೆ.

ಇತರ ಅರ್ಜಿದಾರರಿಗೆ 25ರಷ್ಟು ರಿಯಾಯಿತಿಯೊಂದಿಗೆ ₹15,000ಕ್ಕೆ ಕೋರ್ಸ್ ಲಭ್ಯವಿದೆ.

ಜಪಾನೀಸ್ ಭಾಷಾ ಜ್ಞಾನವನ್ನು ಬೆಳೆಸಿಕೊಂಡು ಜಾಗತಿಕ ಮಟ್ಟದಲ್ಲಿ ಹೊಸ ಶೈಕ್ಷಣಿಕ ಮತ್ತು ಉದ್ಯೋಗಾವಕಾಶಗಳನ್ನು ಪಡೆಯಲು ಈ ಕೋರ್ಸ್ ನೆರವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 81231 65069 / 73497 80582 ಸಂಪರ್ಕಿಸಬಹುದು.