ಉಡುಪಿ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಆರ್ಥಿಕ ವರ್ಷ 2013-14 ರಿಂದ 2018-19 ನೇ ಸಾಲಿನಲ್ಲಿ ಅರಿವು, ಶ್ರಮಶಕ್ತಿ, ಸ್ವಾವಲಂಬನಾ, ಎನ್.ಎಂ.ಎಫ್.ಡಿ.ಸಿ ನೇರ ಸಾಲ, ಮೈಕ್ರೋ ಕಿರುಸಾಲ, ಪಶುಸಂಗೋಪನಾ ಯೋಜನೆ ಮುಂತಾದ ವಿವಿಧ ಯೋಜನೆಗಳಡಿ ನೀಡಲಾಗಿರುವ ಸಾಲದ ಮೊತ್ತವನ್ನು ಪೂರ್ಣವಾಗಿ ಅಸಲು ಪಾವತಿಸುವ ಫಲಾನುಭವಿಗಳಿಗೆ ಸರ್ಕಾರದ ಆದೇಶದಂತೆ ಒಂದಾವರ್ತಿ ತೀರುವಳಿ ಯೋಜನೆ(ಒ.ಟಿ.ಎಸ್) ಮೂಲಕ ಬಡ್ಡಿಯನ್ನು ಮನ್ನಾ ಮಾಡುವ ಯೋಜನೆ ಈಗಾಗಲೇ ಜಾರಿಗೆ ತರಲಾಗಿದ್ದು, ಫಲಾನುಭವಿಯು ಸಾಲದ ಖಾತೆಯಲ್ಲಿ ಬಾಕಿ ಉಳಿದಿರುವ ಮೂಲ ಮೊತ್ತವನ್ನು ಪಾವತಿಸಿ ಸರಕಾರದ “ಒಂದಾವರ್ತಿ ತೀರುವಳಿ ಯೋಜನೆ” ಮೂಲಕ ಬಡ್ಡಿಯನ್ನು ಮನ್ನಾ ಯೋಜನೆಯಡಿ ತಮ್ಮ ಸಾಲದ ಖಾತೆಯನ್ನು ಶಾಶ್ವತವಾಗಿ ಮುಕ್ತಾಯಗೊಳಿಸಲು ಈ ಹಿಂದೆ ನಿಗಧಿಪಡಿಸಿದ್ದ ಅವಧಿಯನ್ನು ಆಗಸ್ಟ್ 31 ರ ವರೆಗೆ ವಿಸ್ತರಿಸಲಾಗಿದೆ.
“ಒಂದಾವರ್ತಿ ತೀರುವಳಿ ಯೋಜನೆ” ಮೂಲಕ ಬಡ್ಡಿ ಮನ್ನಾ ಯೋಜನೆ ಅಪೇಕ್ಷಿಸುವ ಫಲಾನುಭವಿಗಳು ನಿಗಮದ ವೆಬ್‌ಸೈಟ್ https://kmdconline.karnataka.gov.in/Portal/ots-repayment “ಆನ್‌ಲೈನ್” ಮುಖಾಂತರ ಮರುಪಾವತಿ ಮಾಡಿ ಅಥವಾ ನಿಗಮದ ಜಿಲ್ಲಾ ವ್ಯವಸ್ಥಾಪಕರ P್ಪಛೇರಿ, ಮೌಲಾನಾ ಅಜಾದ್ ಭವನ, 1ನೇ ಮಹಡಿ, ಪಶು ಚಿಕಿತ್ಸಾಲಯದ ಹತ್ತಿರ, ಅಲೆವೂರು ರಸ್ತೆ, ಶಿವಳ್ಳಿ ಗ್ರಾಮ, ಮಣಿಪಾಲ ಉಡುಪಿ-576104 ಇಲ್ಲಿಗೆ ಭೇಟಿ ನೀಡಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹ್ಮದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಛೇರಿ ದೂರವಾಣಿ ಸಂಖ್ಯೆ: 0820-2574990, 8277944231 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಪ್ರಕಟಣೆ ತಿಳಿಸಿದೆ.















