ಮಣಿಪಾಲ: ಮಣಿಪಾಲದ ಶ್ರೀ ಶಾರದಾ ಶಿಕ್ಷಕ ತರಬೇತಿ ಸಂಸ್ಥೆಯ ‘ಘಟಿಕೋತ್ಸವ 2025-26’ ಸಮಾರಂಭದಲ್ಲಿ ಶ್ರೀಮತಿ ಸುನಂದಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು.
ಮಣಿಪಾಲದ ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮೊಂಟೆಸ್ಸೋರಿ/ನರ್ಸರಿ ಟೀಚರ್ ಟ್ರೈನಿಂಗ್ (ಆ.ಒ.ಇಜ.) ಶಿಕ್ಷಕಿಯರ ತರಬೇತಿ ಪಡೆದ 2025-26 ಸಾಲಿನ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಪ್ರಮಾಣ ಪಾತ್ರ ವಿತರಣೆ ಮತ್ತು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭವು ಮಣಿಪಾಲದ ಕ್ರಿಸ್ಟಲ್ ಬಿಜ್ ಹಬ್ ನಲ್ಲಿ ಆ.8ರಂದು, ಶ್ರೀಮತಿ ಚಂದ್ರಕಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮುಖ್ಯೋಪಾಧ್ಯಾರಾದ ಶ್ರೀಮತಿ ಸುನಂದಾ ಕೆಮ್ಮಣ್ಣು, ಸಾಲಿಹತ್ ಇಂಗ್ಲಿಷ್ ಮಾಧ್ಯಮ ಹೈಸ್ಕೂಲ್, ತೋನ್ಸೆ, ಇವರು ತರಬೇತಿ ಪೂರೈಸಿದ ಶಿಕ್ಷಕ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಶಿಕ್ಷಕರ ಪಾತ್ರವು ‘ಬೆಲ್ ಮತ್ತು ಬಿಲ್’ ಗೆ [ಶಾಲಾ ಗಂಟೆ ಮತ್ತು ವೇತನಕ್ಕೆ] ಸೀಮಿತವಾಗಿರಬಾರದು. ಬೋಧನೆಯು ಸಮಯ ಮತ್ತು ಸಂಭಾವನೆಗಿಂತಲೂ ಮೀರಿದ ಒಂದು ಉದಾತ್ತ ವೃತ್ತಿ ಎಂದು ಅವರು ಒತ್ತಿ ಹೇಳಿದರು.
ನಿಜವಾದ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಸದಾ ತಮ್ಮ ಹೃದಯದಲ್ಲಿ ಹೊತ್ತುಕೊಂಡಿರುತ್ತಾರೆ. ಶಿಕ್ಷಕರ ಗುರುತು ಶಾಲೆಯ ಗೇಟ್ ನೊಂದಿಗೆ ಕೊನೆಗೊಳ್ಳುವುದಿಲ್ಲ.ತರಗತಿಯ ಒಳಗೆ ಮತ್ತು ಹೊರಗೆ ನಮ್ಮ ಮಾತು, ನಡವಳಿಕೆ ಮತ್ತು ಮೌಲ್ಯಗಳು ಮಕ್ಕಳು ಹಾಗೂ ಸಮಾಜವನ್ನು ರೂಪಿಸುತ್ತಲೇ ಇರುತ್ತವೆ ಎಂದರು.

ವೇದಿಕೆಯಲ್ಲಿ ಸಂಸ್ಥೆಯ ಸಲಹಾ ಸಮಿತಿಯ ಡಾ. ಎನ್ ವಿ. ಕಾಮತ್ ರವರು ಉಪಸ್ಥಿತರಿದ್ದರು. 2025-26ನೇ ಸಾಲಿನ ಆ.ಒ.ಇಜ. ಪರೀಕ್ಷೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಶಿಷ್ಟ ಶ್ರೇಣಿ ಪಡೆದುಕೊಂಡ ಶ್ರೀಮತಿ ದೃಷ್ಟಿ ಮತ್ತು ಶ್ವೇತಾ ಹಾಗೂ ಬೇರೆ ಬೇರೆ ವಿಭಾಗದಲ್ಲಿ ಮೊದಲ ಹತ್ತು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಉಪನ್ಯಾಸಕರಾದ ಶ್ರೀಮತಿ ದಿವ್ಯ ಕೋಟ್ಯಾನ್ ಹಾಗೂ ಶ್ರೀಮತಿ ಚೇತನಾರವರು ಪ್ರಮಾಣಪತ್ರ ವಿತರಣೆ ಕಾರ್ಯಕ್ರಮವನ್ನು ಹಾಗೂ ವಿದ್ಯಾರ್ಥಿನಿಯರಾದ ದೀಕ್ಷಾ ಮತ್ತು ನಿಶಾ ಸಮಾರಂಭದ ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಾಂಶುಪಾಲೆ ಶ್ರೀಮತಿ ಸುನೀತಾರವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.















