ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸಿ. ಎ ಫೌಂಡೇಶನ್‌ ಓರಿಯಂಡೇಶನ್‌ ಕಾರ್ಯಕ್ರಮ

ಕಟಪಾಡಿ ಉಡುಪಿ : ತ್ರಿಶಾ ವಿದ್ಯಾ ಪಿಯು ಕಾಲೇಜು ಕಟಪಾಡಿಯ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಮಾಹಿತಿ
ಕಾರ್ಯಕ್ರಮವನ್ನು ಕಟಪಾಡಿಯ ಶ್ರೀಮತಿ ಶಾರದಾ ವಾಸುದೇವ ಕಿಣಿ ಕಲಾಭವನದಲ್ಲಿ ಆಯೋಜಿಸಲಾಯಿತು.
ಜ್ಯೋತಿ ಬೆಳಗಿಸುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿ.ಎ ಗೋಪಾಲಕೃಷ್ಣ ಭಟ್ ಅವರು ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಸಿ.ಎ ಕೋರ್ಸ್ ಬಗ್ಗೆ ಮತ್ತು ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ನಂತರ ಪ್ರೊ. ಹರಿಪ್ರಸಾದ್, ಪ್ರಾಂಶುಪಾಲರು ತ್ರಿಶಾ ವಿದ್ಯಾ ಪಿ ಯು ಕಾಲೇಜು, ತರಗತಿ ನಿಯಮಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ತ್ರಿಶಾ ಕ್ಲಾಸಸ್‌ನ ಪ್ರಜ್ಞಾ ಇವರು ವಹಿಸಿದ್ದರು. ವಂದನಾರ್ಪಣೆಯನ್ನು ನಿಧಿ ಅಮೀನ್ (ಇಂಗ್ಲಿಷ್ ಉಪನ್ಯಾಸಕಿ) ಇವರು ನಡೆಸಿಕೊಟ್ಟರು.