ಈ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಆಗಸ್ಟ್ 15 ರಂದು ಉಡುಪಿಯ ಇಂಚರ ಸರ್ಜಿಕಲ್ ಕ್ಲಿನಿಕ್ ನಲ್ಲಿ ಮುಂಚಿತವಾಗಿ ನೊಂದಾಯಿಸಿದ ಐವತ್ತು ಜನ ಮಧುಮೇಹ ರೋಗಿಗಳಿಗೆ ಉಚಿತವಾಗಿ ಪಾದರಕ್ಷೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಶ್ರೀ ವೈ ಎಲ್ ಎನ್ ಜೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇವರ ಪ್ರಾಯೋಜಕತ್ವದಲ್ಲಿ ನಡೆಸಲಾಗುತ್ತಿದೆ. ಜೊತೆಗೆ ಆಸಕ್ತರಿಗೆ ರಿಯಾಯಿತಿ ದರದಲ್ಲಿ ಕಾಮಾಲೆ ರೋಗ( Hepatitis A and B) ನಿರೋಧಕ ಚುಚ್ಚುಮದ್ದು ನೀಡುವ ಕಾರ್ಯಕ್ರಮವನ್ನು
ಹಾಗೂ ಉಚಿತ ಎಲುಬು ಸಾಂದ್ರತೆ (bone density)ಪರೀಕ್ಷೆ ಹಾಗೂ ಮಧುಮೇಹ ರೋಗಿಗಳ ಪಾದಗಳ ನರಪರೀಕ್ಷೆಯನ್ನು ( neuropathy test) ಸಹ ಅಂದು ನಡೆಸಲಾಗುವುದು ಎಂದು ಸಂಘಟಕರಾದ ವೈ ಸುದರ್ಶನ್ ರಾವ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾಗವಹಿಸುವವರು 7676799859 ಈ ಫೋನ್ ಸಂಖ್ಯೆಗೆ ಕರೆ ಮಾಡಿ ನೊಂದಾಯಿಸಲು ವಿನಂತಿಸಲಾಗಿದೆ.















