ಉಡುಪಿ: ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ಉಚಿತ ಔಷಧೀಯ ಸಸ್ಯಗಳ ವಿತರಣಾ ಕಾರ್ಯಕ್ರಮವು ಜುಲೈ 29 ರಂದು ಗುರುಪೂರ್ಣಿಮೆ ಹಾಗೂ ವನಮಹೋತ್ಸವ ಸಪ್ತಾಹದ ಅಂಗವಾಗಿ ಪ್ರತಿ ವರ್ಷದಂತೆ ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಸಂಸ್ಥೆಯ ಆವರಣದಲ್ಲಿ ಆಸಕ್ತ ಸಾರ್ವಜನಿಕರಿಗೆ ವಿವಿಧ ಜಾತಿಯ ಔಷಧೀಯ ಗುಣಗಳುಳ್ಳ ಮರ, ಗಿಡ, ಬಳ್ಳಿಗಳ ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಸಂಸ್ಥೆಯ ಪತ್ರಿಕಾ ಪ್ರಕಟನೆ ತಿಳಿಸಿದೆ.
ಅಂದು ಮುಂಜಾನೆ 9:30 ರಿಂದ 4 ಗಂಟೆಯವರೆಗೆ ಪ್ರತಿ ಕುಟುಂಬಕ್ಕೆ ವಿವಿಧ ಜಾತಿಯ ನಾಲ್ಕು ಗಿಡಗಳನ್ನು ತಲಾ ಒಂದರಂತೆ ಉಚಿತವಾಗಿ ನೀಡಲಾಗುವುದು.
ಔಷದೂಪಯೋಗಿ ಗಿಡಗಳಾದ ಕಹಿಬೇವು, ನೆಲ್ಲಿ, ನೇರಳೆ, ಹಿಪುö್ಪ ನೇರಳೆ, ಮಾವು, ಅಶೋಕ, ಶ್ರೀಗಂಧ, ರಕ್ತಚಂದನ, ವಾಟೆಹುಳಿ ಬಡ್ಪುಳಿ, ಜಾರಿಗೆಹುಳಿ ಮುಂತಾದ ಸಸಿಗಳನ್ನು ಮೊದಲು ಬಂದವರಿಗೆ ಆದ್ಯತೆ ಮೇರೆಗೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲಾ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟನೆ ಕೋರಿದೆ.















