ಕಾರ್ಕಳ: ವ್ಯಕ್ತಿ ನಾಪತ್ತೆ

ಉಡುಪಿ: ಮೂಲ್ಕಿಯ ಕೆರೆಕಾಡುವಿನಲ್ಲಿ ವಾಸವಿದ್ದ ಉದಯ (69) ಎಂಬ ವ್ಯಕ್ತಿಯು ತನ್ನ ಮಗಳ ಮನೆಯಾದ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಬೆರ್ನೊಟ್ಟು ಹೌಸ್‌ಗೆ ಬಂದಿದ್ದವರು ಜುಲೈ 18 ರ ಮಧ್ಯಾಹ್ನ 2.30 ರಿಂದ ಸಂಜೆ 5.30 ರ ಅವಧಿಯಲ್ಲಿ ಮನೆಯಿಂದ ಹೊರಗೆ ಹೋದವರು ವಾಪಾಸು ಬರದೇ ನಾಪತ್ತೆಯಾಗಿರುತ್ತಾರೆ.

177 ಸೆಂ.ಮೀ ಎತ್ತರ, ಕಪ್ಪು ಮೈಬಣ್ಣ, ಕೋಲುಮುಖ, ಸಾಧಾರಣ ಶರೀರ ಹೊಂದಿರುವ ಇವರು ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.