ನವದೆಹಲಿ: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರರಿಗೆ ಸಿಹಿಸುದ್ದಿ. ಇನ್ಶೂರೆನ್ಸ್ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (NICL) ದೇಶಾದ್ಯಂತ 500 ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕದಲ್ಲಿ 30 ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ
- ಒಟ್ಟು ಹುದ್ದೆಗಳು: 500
- ಕರ್ನಾಟಕದಲ್ಲಿನ ಹುದ್ದೆಗಳು: 30
ಶೈಕ್ಷಣಿಕ ಅರ್ಹತೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಅಭ್ಯರ್ಥಿಯು ಅರ್ಜಿ ಸಲ್ಲಿಸುವ ರಾಜ್ಯದ ಪ್ರಾದೇಶಿಕ ಭಾಷೆಯನ್ನು (ಕರ್ನಾಟಕಕ್ಕೆ ಕನ್ನಡ) ಓದಲು, ಬರೆಯಲು ಮತ್ತು ಮಾತನಾಡಲು ಬಲ್ಲವರಾಗಿರಬೇಕು.
ವಯೋಮಿತಿ
2026ರ ಜುಲೈ 1ರ ಅನ್ವಯ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ವಯಸ್ಸಿರಬೇಕು. ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಅರ್ಜಿ ಶುಲ್ಕ
- ಸಾಮಾನ್ಯ / OBC / EWS ಅಭ್ಯರ್ಥಿಗಳು: ₹850
- SC / ST / ಮಾಜಿ ಸೈನಿಕರು ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕ ವಿನಾಯಿತಿ
ಸಂಬಳ
ಆರಂಭಿಕ ಮೂಲ ವೇತನ ₹36,290 ಆಗಿದ್ದು, ವಿವಿಧ ಭತ್ಯೆಗಳೊಂದಿಗೆ ಮೆಟ್ರೋ ನಗರಗಳಲ್ಲಿ ಮಾಸಿಕ ವೇತನ ಸುಮಾರು ₹63,000 ವರೆಗೆ ದೊರೆಯಲಿದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ: ಜುಲೈ 18, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 7, 2026
- ಪೂರ್ವಭಾವಿ ಪರೀಕ್ಷೆ: ಆಗಸ್ಟ್ 27, 2026
- ಮುಖ್ಯ ಪರೀಕ್ಷೆ: ಅಕ್ಟೋಬರ್ 30, 2026
ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಮತ್ತು ಆನ್‌ಲೈನ್ ಅರ್ಜಿ ಸಲ್ಲಿಕೆಗೆ NICL ಮತ್ತು IBPS ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು.
ನೇಮಕಾತಿ ಅಧಿಸೂಚನೆ: https://nationalinsurance.nic.co.in/sites/default/files/2026-07/NICL%20ASSISTANT%20-%20Recuritment%20Advertisment%202026-27%20%28Final%29.pdf
ಅರ್ಜಿ ಸಲ್ಲಿಕೆ ಲಿಂಕ್:















