ಉಡುಪಿ- ಮಂಗಳೂರು: ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಟೆಕ್ನಿಷಿಯನ್ ಹಾಗೂ EOT ಕ್ರೇನ್ ಆಪರೇಟರ್ ಹುದ್ದೆಗಳಿಗೆ ನೇಮಕಾತಿ: ಆಸಕ್ತಿ ಅರ್ಹತೆ ಇದ್ರೆ ಕೂಡಲೇ ಅರ್ಜಿ ಸಲ್ಲಿಸಿ

ಉಡುಪಿ: ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ರಿಫೈನರಿ ಮತ್ತು ಶಿಪ್‌ಬಿಲ್ಡಿಂಗ್ ಘಟಕಗಳಲ್ಲಿ ಕೆಲಸ ಮಾಡಲು ಎಲೆಕ್ಟ್ರಿಕಲ್ ಟೆಕ್ನಿಷಿಯನ್, ಮೆಕ್ಯಾನಿಕಲ್ ಟೆಕ್ನಿಷಿಯನ್ ಹಾಗೂ EOT ಕ್ರೇನ್ ಆಪರೇಟರ್ ಹುದ್ದೆಗಳಿಗೆ ತಕ್ಷಣದ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ.

ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ವಿಭಾಗದಲ್ಲಿ ITI ಅಥವಾ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಹಾಗೂ ಕಾರ್ಯಾಚರಣೆ ಅಥವಾ ನಿರ್ವಹಣೆ (Operation/Maintenance) ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಅನುಭವಕ್ಕೆ ಅನುಗುಣವಾಗಿ ಆಕರ್ಷಕ ವೇತನದೊಂದಿಗೆ PF, ESI ಹಾಗೂ ಓವರ್‌ಟೈಮ್ (OT) ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು [email protected] ಇಮೇಲ್ ವಿಳಾಸಕ್ಕೆ ಕಳುಹಿಸಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ 8150000527 ಸಂಖ್ಯೆಯನ್ನು ಸಂಪರ್ಕಿಸಬಹುದು. ಹುದ್ದೆಗಳ ಸಂಖ್ಯೆ ಸೀಮಿತವಾಗಿರುವುದರಿಂದ ಆಸಕ್ತರು ಶೀಘ್ರವೇ ಅರ್ಜಿ ಸಲ್ಲಿಸಿ.