Gold Rate Rise: ತೈಲ ಬೆಲೆ ಹೆಚ್ಚಳವಾಗುತ್ತಿದ್ದರೂ ದಿಢೀರ್ ಭಾರಿ ಏರಿಕೆ ಕಂಡ ಚಿನ್ನದ ಬೆಲೆ: ಒಂದೇ ದಿನಕ್ಕೆ 2 ಸಾವಿರ ರೂ ಏರಿಕೆ, ಬೆಳ್ಳಿ ಬೆಲೆಯೂ ತುಟ್ಟಿ

ಚಿನ್ನದ ಬೆಲೆಯ ಏರಿಕೆ ಪರ್ವ ಶುರುವಾಗಿದೆ. ಇಳಿದಷ್ಟೇ ವೇಗವಾಗಿ ಚಿನ್ನದ ಬೆಲೆ ಏರತೊಡಗಿದೆ. ಕಲೆದ ನಾಲ್ಕು ದಿನಗಳಿಂದ ಏರುಗತಿಯಲ್ಲಿರುವ ಚಿನ್ನ 14 ಸಾವಿರದಿಂದ 14,651 ಕ್ಕೆ ಹೆಚ್ಚಳ ಕಂಡಿದೆ. ಇಂದಿನ ಬೆಲೆ ವಿವರ ಇಲ್ಲಿದೆ ತಿಳಿದುಕೊಳ್ಳಿ.

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ 2% ನಷ್ಟು ಏರಿಕೆಯಾಗಿದೆ. ಅಮೆರಿಕ-ಿರಾನ್ ಸಂಘರ್ಷವೂ ಮುಗಿದಿಲ್ಲ. ಆದರೂ ಈ ಬೆಳವಣಿಗೆಗಳ ಮಧ್ಯೆ ಚಿನ್ನ ಬೆಳ್ಳಿ ದರಗಳು ದಿಢೀರ್ ಏರಿಕೆ ಕಂಡಿವೆ, ಇಂದು ಚಿನ್ನಕ್ಕೆ 2290 ರೂ ಹೆಚ್ಚಳವಾಗಿದ್ದರೆ, ಬೆಳ್ಲಿ ಬೆಲೆ 5 ಸಾವಿರ ಹೆಚ್ಚಳವಾಗಿದೆ ಎಂದು ಗುಡ್‌ ರಿಟರ್ನ್ಸ್ ವರದಿ ಮಾಡಿದೆ.

ಚಿನ್ನದ ಶುದ್ಧತೆ1 ಗ್ರಾಂ ಬೆಲೆ10 ಗ್ರಾಂ ಬೆಲೆ
22 ಕ್ಯಾರೆಟ್ ಚಿನ್ನ134301,34,300
24 ಕ್ಯಾರೆಟ್ ಚಿನ್ನ146511,46,510
18 ಕ್ಯಾರೆಟ್ ಚಿನ್ನ10,9881,09,880

ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ?
ಜುಲೈ 22 , 2026 ಬುಧವಾರದಂದು 24 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 229 ರೂ ಏರಿಕೆ ಆಗಿದ್ದು, ಗ್ರಾಂ ಬೆಲೆ ಈಗ 14,651 ರೂ ದಾಖಲಾಗಿದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ 2290 ರೂ ಏರಿಕೆಯಾಗಿದ್ದು 1,46,510 ರೂಪಾಯಿಗೆ ಏರಿಕೆಯಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 210 ರೂ ಏರಿಕೆಯಾಗಿದೆ. 1 ಗ್ರಾಂ ಬೆಲೆ ಈಗ 13430 ರೂ ಆಗಿದ್ದು 10 ಗ್ರಾಂ ಬೆಲೆ 2100 ರೂ ಏರಿಕೆಯಾಗಿ, ಈಗ ಬೆಲೆ 1,34,300 ರೂಪಾಯಿ ದಾಖಲಾಗಿದೆ.

ಬೆಂಗಳೂರಿನ ಬೆಲೆ ಎಷ್ಟಿದೆ?
ಬೆಂಗಳೂರಲ್ಲಿ ಶುದ್ಧ ಚಿನ್ನದ ಗ್ರಾಂ ಬೆಲೆ 14,651 ರೂ ಇದ್ದು, ಬೆಳ್ಳಿ ಬೆಲೆ ಗ್ರಾಂ ಗೆ 240 ರೂ ಇದೆ.

ಬೆಳ್ಳಿ ಬೆಲೆ ಏರಿಕೆ
ಬೆಳ್ಳಿ ಬೆಲೆಯಲ್ಲಿ ಇಂದು 5 ಸಾವಿರ ಹೆಚ್ಚಳವಾಗಿದೆ. ಗ್ರಾಂ ಬೆಲೆ 240 ರೂ ಆಗಿದ್ದು,, 2,40,000 ರೂ ದಾಖಲಾಗಿದೆ.