ಕೋಟ ಮೂರ್ತೆದಾರರ ಸಹಕಾರಿ ಸಂಘ ನಿ. ಕೋಟ ಇವರ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಕೆಮ್ಮಣ್ಣು ಇವರಿಗೆ ಪ್ರಾಜೆಕ್ಟರ್ ಕೊಡುಗೆ

ಕೋಟ ಮೂರ್ತೆದಾರರ ಸಹಕಾರಿ ಸಂಘ ನಿ. ಕೋಟ ಇವರ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಕೆಮ್ಮಣ್ಣು ಇವರಿಗೆ ಪ್ರಾಜೆಕ್ಟರ್ ಕೊಡುಗೆಯನ್ನು ಸಂಘದ ಅಧ್ಯಕ್ಷ ಕೆ. ಕೊರಗ ಪೂಜಾರಿ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀ ನಾರಾಯಣ, ಮುಖ್ಯ ಶಿಕ್ಷಕಿ ಗ್ರೇಸಿ ಬಾಂಜಿ, ಕೋಟ ಮೂರ್ತೆದಾರರ ಸಹಕಾರಿ ಸಂಘದ ಸಿಇಓ ಜಗದೀಶ್ ಕೆಮ್ಮಣ್ಣು, ಶಾಖಾ ವ್ಯವಸ್ಥಾಪಕರಾದ ಉದಯ ಪೂಜಾರಿ, ನಿರ್ದೇಶಕರಾದ ಪ್ರಭಾವತಿ ಡಿ ಬಿಲ್ಲವ, ಶಾಲಾ ಹಿತರಕ್ಷಣಾ ಸಮಿತಿಯ ನಂದಕಿಶೋರ್, ನಾಗರಾಜ್ ಶೆಟ್ಟಿ, ತಾರನಾಥ ಪೂಜಾರಿ, ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಅಧ್ಯಕ್ಷ ಸುಶೀಲ್ ಬೋಳಾರ್, ಕಾರ್ಯದರ್ಶಿ ಟಿ ಆರ್ ದೊಡ್ಡಮನಿ, ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ನೇಜಾರ್ ಲೀಜನ್‌ ಅಧ್ಯಕ್ಷರಾದ ಮಿತ್ರಕುಮಾರ್ ಉಪಸ್ಥಿತರಿದ್ದರು.