-ರಾಮ್ ಅಜೆಕಾರ್
ಕಾರ್ಕಳ: ಪಂಪ್ ಸೆಟ್ಟಿಗೆ ನೆಟ್ವರ್ಕ್ ಆಧಾರಿತ ವ್ಯವಸ್ಥೆ ಮುಲಕ ಅಜೆಕಾರು ಮರ್ಣೆ ಗ್ರಾಮ ಪಂಚಾಯತ್ ರಾಜ್ಯದಲ್ಲಿಯೆ ಗಮನ ಸೆಳೆಯುವಂತೆ ಮಾಡಿದೆ.
ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ದೆಪ್ಪುತ್ತೆ ಪರಿಸರ ಕ್ಕೆ ನೀರಾವರಿ ವ್ಯವಸ್ಥೆ ಇರಲಿಲ್ಲ .ಇದಕ್ಕಾಗಿ ಹತ್ತು ಕಿ ಮೀ ದೂರದ ತೀರ್ಥಟ್ಟಿ ನದಿಯಿಂದ ನೀರು ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆ ಉಂಟಾಯಿತು. ತೀರ್ಥ ಟ್ಟಿ ನದಿ ಪರಿಸರ ದುರ್ಗಮ ಪ್ರದೇಶ ವಾದ್ದರಿಂದ ಅನಾನುಕೂಲವಾಗುತಿತ್ತು.ದೆಪ್ಪುತ್ತೆ ಪರಿಸರದಲ್ಲಿ ಇನ್ನೂರಕ್ಕು ಹೆಚ್ಚು ಮನೆಗಳಿವೆ.ನೀರು ವ್ಯವಸ್ಥೆ ಯಾದ ಬಳಿಕ ಅದರ ನಿರ್ವಹಣೆ ಮಾಡುವಲ್ಲಿ ಹೆಚ್ಚಾಗಿ ಓವರ್ ಹೆಡ್ ಟ್ಯಾಂಕ್ ಮೂಲಕ ಹರಿದು ನೀರು ಪೋಲಾಗುತಿತ್ತು. ವಿದ್ಯುತ್ ಹೆಚ್ಚು ಬಳಕೆಯಾಗುತಿತ್ತು.
ಅದಕ್ಕಾಗಿ ಪಂಚಾಯತ್ ನೆಟ್ವರ್ಕ್ ನಿರ್ಧರಿತ ಪಂಪ್ ಸೆಟ್ ವ್ಯವಸ್ಥೆ ಗಾಗಿ ಮೊರೆ ಹೋದರು.ಉಡುಪಿ ಯ ಪ್ರತಿಷ್ಠಿತ ಕಂಪೆನಿಯು ಗುತ್ತಿಗೆ ಪಡೆದು ಕಾರ್ಯ ನಿರ್ವಹಿಸಿ ವ್ಯವಸ್ಥೆಯನ್ನು ಜಾರಿಗೆಗೊಳಿಸಿತು.
ಮೊಬೈಲ್ ನಂಬರ್ ಸಹಾಯದಿಂದ ಆನ್ ಮತ್ತು ಆಫ್ ವ್ಯವಸ್ಥೆ ಮಾಡಿದರ ಮುಖೇನ ಜನಸ್ನೆಹಿಯಾಗಿಸಿದೆ.
ಹೇಗೆ ಕಾರ್ಯ ನಿರ್ವಹಿಸುತ್ತೆ ?:
ಒಂದು ಸಿಂ ಅನ್ನು ಕ್ಯಾಪಸಿಟರ್ ಗಾತ್ರದ ಯಂತ್ರದಲ್ಲಿ ಅಳವಡಿಸಲಾಗುತ್ತದೆ.ಆ ಸಿಂ ನಲ್ಲಿ ನೀರಿನ ನಿರ್ವಹಣೆ ಮಾಡುವ ಇಬ್ಬರ ನಿರ್ವಹಕರ ನಂಬರುಗಳನ್ನು ನೋಂದಾಯಿಸಬೇಕು.ನಂತರ ನೋಂದಾಯಿತ ನಂಬರ್ ಗಳ ಮೂಲಕ ಆ ಸಿಂ ಗೆ ಕರೆಮಾಡಿದಾಗ ivr ಗಳ ಮೂಲಕ ಸೂಚನೆ ನೀಡುತ್ತದೆ ಆನ್ ಆಫ್ ಮಾಡಲು ಮಾರ್ಗದರ್ಶನ ನೀಡುತ್ತದೆ . ಜೊತೆಗೆ ಆಫ್ ಆನ್ ಆದ ಬಳಿಕ ಪ್ರತ್ಯೇಕ ಮೆಸೇಜ್ ಕೂಡ ಕಳಿಸುತ್ತದೆ. ವಿದ್ಯುತ್ ಪೂರೈಕೆ ಯಲ್ಲಿ ಏರಿಳಿತ ವಾಗಿದ್ದರೆ ಹಾಗು ಪಂಪಿನಲ್ಲಿ ನೀರಿನ ಪೂರೈಕೆಯಾಗದಿದ್ದರೆ ಸ್ವಯಂಚಾಲಿತ ವಾಗಿ ಆಫ್ ಆಗುತ್ತದೆ.ಜೊತೆಗೆ ಪ್ರತ್ಯೇಕ ಮೆಸೆಜ್ ಕೂಡ ಕಳಿಸುತ್ತದೆ.
ನೂರಾರು ಜನರು ಬಂದು ಮಾಹಿತಿ ಪಡೆದು ಸಾಗುತ್ತಿದ್ದಾರೆ
ಈ ವ್ಯವಸ್ಥೆ ಅಳವಡಿಸಲು ಹದಿನೈದು ಸಾವಿರ ಖರ್ಚು ಬರುತ್ತದೆ. ಈ ವ್ಯವಸ್ಥೆ ಅಳವಡಿಸುವ ಮೊದಲು ಕೆಲಸದಾಳುಗಳಿಗಾಗಿ ಆದರೆ ವಾರ್ಷಿಕ ಮೂವತ್ತು ಸಾವಿರಕ್ಕೂ ಹೆಚ್ಚು ವ್ಯಯ ವಾಗುತಿತ್ತು.
ಎಲ್ಲೇ ಇದ್ದರೂ ದೇಶದಾದ್ಯಂತ ಎಲ್ಲೇ ಸಂಚರಿಸಿದರೂ ನೆಟ್ವರ್ಕ್ವಿರುವ ಪ್ರದೇಶದಿಂದ ಕರೆ ಮಾಡಿದರೆ ಸಾಕು, ನೀರಿನ ಆನ್ ಆಫ್ ಮಾಡಲು ಸಾಧ್ಯ.ನೀರಿನ ಉಳಿತಾಯ ,ವಿದ್ಯುತ್ ಉಳಿತಾಯ ,ಜೊತೆಗೆ ಸಮಯದ ಉಳಿತಾಯವಾಗುತ್ತದೆ ಎನ್ನುತ್ತಾರೆ ಪಂಚಾಯತ್ ಅಧ್ಯಕ್ಷ ದಿನೇಶ್ ಕುಮಾರ್
ಹೆಚ್ಚಿನ ಮಾಹಿತಿಗಾಗಿ :ಮೊ+91973170175