ಹೆಬ್ರಿ: ನಮ್ಮ ಮಕ್ಕಳ ಉಜ್ಜಲ ಭವಿಷ್ಯಕ್ಕೆ ಶಾಲೆ ಮಾತ್ರ ಹೊಣೆ ಅಲ್ಲ. ಜೊತೆಗೆ ಪೋಷಕರ ಪಾತ್ರ ಕೂಡ ಅಷ್ಟೇ ಮುಖ್ಯ. ಶಾಲೆಯಿಂದ ಬಂದ ಮಕ್ಕಳ ಜೊತೆ ಪ್ರೀತಿಯಿಂದ ಬೆರೆತು ಅವರ ಕಲಿಕೆಯ ಬಗ್ಗೆ ಗಮನ ಹರಿಸಬೇಕು. ಮಕ್ಕಳಿಗೆ ಟಿವಿ ಮೊಬೈಲ್ ನೋಡಬೇಡಿ ಹೇಳುವ ಮೊದಲು ನಾವು ನೋಡದೆ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತ್ಯಾಗ ಮಾಡಬೇಕು ಎಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಬ್ರಿ ಉದಯಕುಮಾರ್ ಶೆಟ್ಟಿ ಹೇಳಿದರು.
ಅವರು ಪೆರ್ಡೂರು ಅನಂತ ಪದ್ಮಾನಾಭ ದೇವಸ್ಥಾನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವಳದ ವತಿಯಿಂದ ಕೂಡ ಮಾಡಿದ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ಪುಸ್ತಕ, ಬೆಲ್ಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಾಲೆಯಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಹಾಗೂ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು
ಉತ್ತಮವಾಗಿ ಕಲಿತು ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿ ತನ್ನಿ ಎಂದು ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಮೋದ್ ರೈ ಪಳಜೆ ಹೇಳಿದರು.ಇದೇ ಸಂದರ್ಭದಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡ ಮಾಡಿದ ಸಮವಸ್ತ್ರವನ್ನು ವಿತರಿಸಲಾಯಿತು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ಸುರೇಶ ಕುಂದರ್, ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಜಕುಮಾರ್ ಶೆಟ್ಟಿ, ರಾಮದಾಸ್ ನಾಯಕ್, ದಿನೇಶ್ ಪೂಜಾರಿ, ಲಲಿತಾಂಬ ,ಶಾಂತ, ದೇವಳದ ವ್ಯವಸ್ಥಾಪಕ ಚೆನ್ನಕೇಶವ ಭಟ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಪ್ಪ
ಸಿ ಆರ್ ಪಿ ಶಾಂತ, ಉದಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಅರುಣ್ ಕುಮಾರ್ ಸ್ವಾಗತಿಸಿ, ಶಿಕ್ಷಕಿ ಜಯ ಬಿ. ಕಾರ್ಯಕ್ರಮ ನಿರೂಪಿಸಿ, ಸುಪ್ರೀತಾ ವಂದಿಸಿದರು.















