ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ವಿಶಿಷ್ಟ ವಿನ್ಯಾಸ ಹಾಗೂ ತಂತ್ರಜ್ಞಾನದ ಮೂಲಕ ಗಮನ ಸೆಳೆದಿರುವ ಲಂಡನ್ ಮೂಲದ ಗ್ರಾಹಕ ತಂತ್ರಜ್ಞಾನ ಸಂಸ್ಥೆಯಾದ ಬ್ರ್ಯಾಂಡ್ ನಥಿಂಗ್, ತನ್ನ ಬಹುನಿರೀಕ್ಷಿತ ಫೋನ್ (4ಬಿ) ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ.
ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ನಥಿಂಗ್ ತಂತ್ರಜ್ಞಾನದ ಹೊಸ ಅನುಭವವನ್ನು ನೀಡಲು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ಭಾರಿ ಯಶಸ್ಸು ಕಂಡಿದ್ದ ಫೋನ್ (4ಎ) ಸರಣಿಯ ಮುಂದುವರಿದ ಭಾಗವಾಗಿ ಇದನ್ನು ಪರಿಚಯಿಸಲಾಗಿದೆ.
ಕಂಪನಿಯ ಸಿಗ್ನೇಚರ್ ವಿನ್ಯಾಸ, ದೈನಂದಿನ ಶಕ್ತಿಯುತ ಕಾರ್ಯಕ್ಷಮತೆ, ಇಂಟೆಲಿಜೆಂಟ್ ಸಾಫ್ಟ್ವೇರ್ ಮತ್ತು ದೀರ್ಘಕಾಲದ ಬಾಳಿಕೆಯಂಥ ವೈಶಿಷ್ಟ್ಯಗಳನ್ನು ಈ ಫೋನ್ ಒಳಗೊಂಡಿದೆ. ಈ ಫೋನ್ 120 ಹರ್ಟ್ಜ್ ಸಾಮರ್ಥ್ಯದ ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದ್ದು, ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಶಕ್ತಿಯುತ ಸ್ನ್ಯಾಪ್ ಡ್ರಾಗನ್ ಪ್ರೊಸೆಸರ್ ಅಳವಡಿಸಲಾಗಿದೆ. ಛಾಯಾಗ್ರಹಣ ಪ್ರಿಯರಿಗಾಗಿ ಓಐಎಸ್ ತಂತ್ರಜ್ಞಾನದ 50 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ವಿಶೇಷವಾಗಿ ಭಾರತೀಯ ಮಾರುಕಟ್ಟೆಯ ಹವಾಮಾನ ಪರಿಸ್ಥಿತಿ ಮತ್ತು ಭಾರತೀಯರ ಬಳಕೆಯ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಭಾರಿ ಸಾಮರ್ಥ್ಯದ 6000 ಎಂಎಎಚ್ ಬ್ಯಾಟರಿ ಇದರಲ್ಲಿದೆ.
ಫೆÇೀನ್ ಒಮ್ಮೆ ಚಾರ್ಜ್ ಮಾಡಿದರೆ ಸತತ 18 ಗಂಟೆಗಳ ಕಾಲ ನಿರಂತರ ಬಳಕೆಗೆ ಸಾಥ್ ನೀಡುತ್ತದೆ. ಇದರಲ್ಲಿ 22 ಗಂಟೆಗಳ ಕಾಲ ಯೂಟ್ಯೂಬ್ ವಿಡಿಯೋ ಅಥವಾ 26 ಗಂಟೆಗಳ ಕಾಲ ಇನ್ ಸ್ಟಾಗ್ರಾಮ್ ಬ್ರೌಸ್ ಮಾಡಬಹುದಾಗಿದೆ. ಪ್ರೀಮಿಯಂ ಫೋನ್ಗಳಲ್ಲಿರುವ ಅಲ್ಟ್ರಾ ಎಕ್ಸ್ ಡಿ ಆರ್ ತಂತ್ರಜ್ಞಾನ, 4ಕೆ ವಿಡಿಯೋ ಮತ್ತು ಪ್ರಥಮ ಬಾರಿಗೆ ಡ್ಯುಯಲ್ ಕ್ಯಾಪ್ಚರ್, ಫಿಲ್ಟರ್ ಮತ್ತು ಕ್ರಿಯೇಟಿವ್ ಪರಿಕರಗಳು, ಆಕರ್ಷಕ ಸೂಪರ್ ಅಮೋಲೆಡ್ ಡಿಸ್ಪ್ಲೇ, ಸಿನಿಮಾ ಶೈಲಿಯ ಸೌಂಡ್ ಸಿಸ್ಟಮ್, ಆಂಡ್ರಾಯ್ಡ್ 16 ಆಧಾರಿತ ನಥಿಂಗ್ ಒಎಸ್ 4.1 ಹಾಗೂ 6 ವರ್ಷಗಳ ಸೆಕ್ಯುರಿಟಿ ಸಪೋರ್ಟ್ ಇತರ ವೈಶಿಷ್ಠ್ಯಗಳಾಗಿರುತ್ತವೆ ಎಂದು ಪ್ರಕಟಣೆ ಹೇಳಿದೆ.















