ಉಡುಪಿ: ಅಜ್ಮೀರ್ ದರ್ಗಾದ ದರ್ಶನ ಮುಗಿಸಿ ಕುಟುಂಬದವರೊoದಿಗೆ ರೈಲಿನಲ್ಲಿ ಕಾಸರಗೋಡಿಗೆ ವಾಪಾಸಾಗುತ್ತಿದ್ದ ಕೇರಳ ರಾಜ್ಯ ಕಾಸರಗೋಡು ತಾಲೂಕು ಮಂಜೇಶ್ವರ ಕನ್ಯಾಲಾಹೌಸ್ ಧರ್ಮತಡ್ಕೆ ನಿವಾಸಿ ಮುಸಾ ಯಾನೆ ಅಬುಸಾಲಿ (68) ಎಂಬ ವೃದ್ಧರು ಜೂನ್ 27 ರಂದು ರಾತ್ರಿ 10 ಗಂಟೆಗೆ ಕಾರವಾರದಿಂದ ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ಮಂಗಳೂರಿನ ಸಮೀಪ ಚಲಿಸುತ್ತಿದ್ದ ರೈಲಿನಿಂದ ನಾಪತ್ತೆಯಾಗಿರುತ್ತಾರೆ.
ರೈಲು ಎಲ್ಲಿಯೋ ನಿಂತ ವೇಳೆ ಯಾವುದೋ ನಿಲ್ದಾಣದಲ್ಲಿ ಇಳಿದು ದಿಕ್ಕು ಕಾಣದೇ ನಾಪತ್ತೆಯಾಗಿರುವುದಾಗಿಯೂ ಅಥವಾ ಬೈಂದೂರು ರೈಲ್ವೇ ನಿಲ್ದಾಣದ ವ್ಯಾಪ್ತಿಯಲ್ಲಿ ಕಾಣೆಯಾಗಿರುವ ಸಾಧ್ಯತೆ ಇರುವುದಾಗಿ ವರದಿಯಾಗಿರುತ್ತದೆ.
ಇವರು ವಯೋವೃದ್ಧರಾಗಿದ್ದು,ನಡೆದಾಡಲು ವಾಕಿಂಗ್ ಸ್ಟಿಕ್ ಬಳಸುತ್ತಿರುತ್ತಾರೆ.5 ಅಡಿ 11 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಮಳಿಯಾಳಿ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254-251033, ಮೊ.ನಂ: 9480805459, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08254-251031, ಮೊ.ನಂ: 9480805434 ಹಾಗೂ ಕಂಟ್ರೋಲ್ ರೂಂ 100, 0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೈಂದೂರು ಪೊಲೀಸ್ ಠಾಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

















