ಕಾರ್ಕಳ ಕ್ರೈಸ್ಟ್ ಕಿಂಗ್: ರಾಷ್ಟ್ರಮಟ್ಟದ ಸಿ.ಎ ಫೌಂಡೇಷನ್ ಪರೀಕ್ಷೆಯಲ್ಲಿ ಶ್ರೀಮಾ ದೇವಾಡಿಗ ಉತ್ತೀರ್ಣ; ಪ್ರಥಮ ಪ್ರಯತ್ನದಲ್ಲಿ ಸಾಧನೆ ಮೆರೆದ ವಿದ್ಯಾರ್ಥಿನಿ

ಕಾರ್ಕಳ: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯವರು (ಐಸಿಎಐ) ಇದೇ ಜೂನ್ ತಿಂಗಳಿನಲ್ಲಿ ನಡೆಸಿದ ಸಿ.ಎ ಫೌಂಡೇಷನ್ ಪರೀಕ್ಷೆಯಲ್ಲಿ ಕಾರ್ಕಳ ಕ್ರೈಸ್ಟ್‍ಕಿಂಗ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೀಮಾ ದೇವಾಡಿಗ 293 ಅಂಕಗಳನ್ನು ಗಳಿಸಿ ಉತ್ತೀರ್ಣಳಾಗಿದ್ದಾಳೆ. ಕ್ರೈಸ್ಟ್‍ಕಿಂಗ್ ಕಾಲೇಜಿನಲ್ಲಿಯೇ ತರಬೇತಿ ಪಡೆದ ಶ್ರೀಮಾ ದೇವಾಡಿಗ ತನ್ನ ಪ್ರಥಮ ಪ್ರಯತ್ನದಲ್ಲಿಯೇ ಉತ್ತೀರ್ಣರಾಗುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾಳೆ. ಇತ್ತೀಚೆಗೆ ಬಿಡುಗಡೆಯಾದ ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶದಲ್ಲಿಯೂ ಶ್ರೀಮಾ ದೇವಾಡಿಗ 596 ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದಲ್ಲಿ ಐದನೇ ರ್ಯಾಂಕ್ ಪಡದುಕೊಂಡಿದ್ದಳು. ಈಕೆ ತೆಳ್ಳಾರು 12ನೇ ಅಡ್ಡರಸ್ತೆ ನಿವಾಸಿಗಳಾದ ಸಂತೋಷ ದೇವಾಡಿಗ ಮತ್ತು ಶ್ರೀಮತಿ ಸುಮಂಗಲಾ ದೇವಾಡಿಗ ಇವರ ಪುತ್ರಿ. ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.