ಮಣಿಪಾಲ: ಕಳೆದ 15 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮಣಿಪಾಲದ ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್’ನಲ್ಲಿ 2026-27ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯನ್ನು ವಿಧ್ಯುಕ್ತವಾಗಿ ಆರಂಭವಾಯಿತು.
ತರಬೇತಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಡಾ. ಎನ್.ವಿ. ಕಾಮತ್ ಅವರು ಮಾತ್ರವಲ್ಲದೇ ಅತಿಥಿಗಳಾಗಿ ಶ್ರೀಮತಿ ಚಂದ್ರಕಲಾ, ಶ್ರೀಮತಿ ಚೇತನಾ ಅವರೂ ಭಾಗವಹಿಸಿ ದೀಪ ಪ್ರಜ್ವಲನದ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು.
ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಸುನೀತಾ ಅವರು ಸಂಸ್ಥೆಯು ನಡೆದು ಬಂದ ದಾರಿ ಹಾಗೂ ಕೋರ್ಸಿನ ಬಗ್ಗೆ ವಿವರಿಸಿದರು.

ಈ ಸಂಸ್ಥೆಯ ಮೂಲಕ ತರಬೇತಿ ಪಡೆದವರು ಶಿಕ್ಷಕಿಯರಾಗಿ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ವೃತ್ತಿನಿರತರಾಗಿರುವುದರ ಬಗ್ಗೆ ತಿಳಿಸಿ ಸಂಸ್ಥೆಯು ತನ್ನದೇ ಆದ ಖ್ಯಾತಿಗಳಿಸಿರುವುದನ್ನು ಗಮನಕ್ಕೆ ತಂದರು.
ಶ್ರೀಮತಿ ಚಂದ್ರಕಲಾರವರು ಭಾಷೆ ಬೆಳವಣಿಗೆ ಹಾಗೂ ಕಥೆಗಳ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳಾದ ಡಾ. ಎನ್. ವಿ. ಕಾಮತ್ ಅವರು “ಡಾ. ಮರಿಯಾ ಮೊಂಟೆಸ್ಸರಿ ಅಭಿವೃದ್ಧಿ ಪಡಿಸಿದ ಈ ವಿಧಾನವು ಮಕ್ಕಳನ್ನು ಸ್ವಾಭಾವಿಕವಾಗಿ ಜ್ಞಾನಕ್ಕಾಗಿ ಉತ್ಸುಕರಾಗಿರುವಂತೆ ಮತ್ತು ಸ್ವತಂತ್ರವಾಗಿ ಗಮನಿಸಿ ಕಲಿಯಲು ಒತ್ತು ನೀಡುತ್ತದೆ.
ತರಬೇತುದಾರರಾಗಿರುವ ಶ್ರೀಮತಿ ದಿವ್ಯಾ ಕೋಟ್ಯಾನ್ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತ ಹಾಗೂ ಧನ್ಯವಾದ ಸಮರ್ಪಣೆಯನ್ನು ನಡೆಸಿಕೊಟ್ಟರು.

















