ಉಡುಪಿ: ಜಿಲ್ಲಾ ಗೃಹರಕ್ಷಕ ದಳದ ಕುಂದಾಪುರ ಘಟಕದ ಗೃಹರಕ್ಷಕಿ ಸ್ನೇಹಾ.ಜೆ. ಮೆಟಲ್ ಸಂಖ್ಯೆ- 156 ರವರು, ಬೆಂಗಳೂರಿನ ಗೃಹರಕ್ಷಕ ಮತ್ತು ಪೌರರಕ್ಷಣಾ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಜೂನ್ 1 ರಿಂದ 25 ರ ವರೆಗೆ ನಡೆದ ರಾಜ್ಯ ಮಟ್ಟದ “ಗೃಹರಕ್ಷಕರ ಅಧಿಕಾರಿಗಳ ತರಬೇತಿ” (ಮಹಿಳೆಯರಿಗೆ) ಯಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಚಿನ್ನದ ಪದಕ ಪಡೆದಿರುತ್ತಾರೆ ಎಂದು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆoಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















