ಬರಹ- ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ. ಸಾರ್ವಜನಿಕರು ಉಡುಪಿ

ಅತ್ಯಂತ ಬುದ್ಧಿವಂತರ ಊರು ಎನ್ನಿಸಿಕೊಂಡ ಉಡುಪಿ ಮಣಿಪಾಲ್ ನಡುವಿನ ಎಂಜಿಎಂ ಕಾಲೇಜಿನ ಎದುರಿನ ಅತ್ಯಂತ ವಾಹನ ನಿಭಿಡ ಜಾಗದಲ್ಲಿ, ಅಪಘಾತದ ತಿರುವಿನ ಮುಖ್ಯ ರಸ್ತೆ ಬದಿಯಲ್ಲಿ ಅಲೆಮಾರಿ ಜನರು ರಸ್ತೆಯ ಬದಿಯಲ್ಲಿ ಬೀಡು ಬಿಟ್ಟಿದ್ದಾರೆ. ಇವರು ಯಾವ ಊರಿನವರೊ ಗೊತ್ತಿಲ್ಲ ಕನ್ನಡ ಭಾಷೆ ಇವರಿಗೆ ಬರುವುದಿಲ್ಲ. ಒಂದಿಷ್ಟು ಮಹಿಳೆಯರು ಮಕ್ಕಳ ಆಡುವ ಆಟಿಕೆ ವಸ್ತುಗಳನ್ನು ಮುಖ್ಯ ರಸ್ತೆಯ ಫುಟ್ ಪಾತ್ ಮತ್ತು ಕೆಳಗಿನ ಇಂಟರ್ ಲಾಕ್ ಮೇಲೆ ಹರಡಿಕೊಂಡು ಗಟ್ಟಿಯಾಗಿ ಮೂರು ನಾಲ್ಕು ದಿನದಿಂದ ಠಿಕಾಣಿ ಹೂಡಿದ್ದಾರೆ. ಸ್ಥಳೀಯರು ಎಷ್ಟೇ ಹೇಳಿದರೂ ಕೇಳದ ರೀತಿಯಲ್ಲಿ ವತಿ೯ಸುತ್ತಾರೆ.
ಇನ್ನೂ ಒಂದು ದೃಶ್ಯವೆಂದರೆ ಎಂಜಿಎಂ.ಕಾಲೇಜಿನ ಎದುರಿನ ಬಸ್ ನಿಲ್ದಾಣದಲ್ಲಿ ಬಟ್ಟೆಗಳನ್ನು ನೇತಾಡಿಸಿಕೊಂಡು ಯಾವ ಪಯಾಣಿಕರು ಆ ಕಡೆಗೆ ಮುಖಮಾಡದ ರೀತಿಯಲ್ಲಿ ಕೊಳಕು ಮಾಡಿಕೊಂಡು ಗಬ್ಬು ವಾಸನೆ ಹುಟ್ಟಿಸಿ ಬಿಟ್ಟಿದ್ದಾರೆ. ಈ ಕಷ್ಟವನ್ನು ಅನುಭವಿಸಿದ ವಿದ್ಯಾರ್ಥಿಗಳು ಉಡುಪಿ ನಗರ ಪೊಲೀಸ್ ಠಾಣೆಗೆ ಈ ಕುರಿತಾಗಿ ತುತು೯ ಮನವಿ ಸಲ್ಲಿಸಿದ್ದಾರೆ. ಇನ್ನಾದರೂ ನಮ್ಮ ಪೊಲೀಸ್ ಇಲಾಖೆ, ನಗರ ಸಭಾ ಅಧಿಕಾರಿಗಳು ಗಮನ ಹರಿಸುತ್ತಾರಾ ಕಾದು ನೋಡಬೇಕು. ನಮ್ಮ ಉಡುಪಿ ಜಿಲ್ಲಾ ಆಡಳಿತ ಅಧಿಕಾರಿಗಳು ಪೊಲೀಸ ಇಲಾಖೆಯವರು ನಗರಸಭಾ ಅಧಿಕಾರಿಗಳು ನೋಡಿದರೂ ನೋಡದ ರೀತಿಯಲ್ಲಿ ಕಣ್ಣು ಮುಚ್ಚಿಕೊಂಡಿದ್ದಾರೆ. ಯಾವುದನ್ನು ಸಮಪ೯ಕವಾಗಿ ಗಮನಿಸುವ ಅಭ್ಯಾಸವೇ ನಗರಸಭೆಗೆ ಇಲ್ಲ. ಇದು ಉಡುಪಿ ನಗರದ ದುರಂತ. ರಸ್ತೆ ಸುರಕ್ಷತೆ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡುವ ಅಧಿಕಾರಿಗಳು ಈ ರೀತಿ ಅನಧೀಕೃತವಾಗಿ ವ್ಯಾಪಾರ ನಡೆಸಿ ಸಾರ್ವಜನಿಕರಿಗೆ ತೊಂದರೆ ಕೊಡುವ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದು ದುರಂತ.
(ಪಬ್ಲಿಕ್ ಪ್ರಾಬ್ಲಂ ಏನೇ ಇದ್ದರೂ ಉಡುಪಿ xpress.com ಗೆ ಬರೆದು ಕಳುಹಿಸಿ. ಫೋಟೋ ವಿಡಿಯೋ ಕಳಿಸಿದರೂ ಓಕೆ )

















