ಉಡುಪಿ: ಹಿಂದೂ ಯುವಸೇನೆ ನಿರ್ಮಿತ ಮನೆ ‘ಅಯೋಧ್ಯೆ’ ಹಸ್ತಾಂತರ

ಉಡುಪಿ: ಹಿಂದೂ ಯುವಸೇನೆ ಉಡುಪಿ ಜಿಲ್ಲಾ ಘಟಕವು ದಾನಿಗಳ ನೆರವಿನಿಂದ ಮಲ್ಪೆ ಕೊಳದ ಬಡ ಕುಟುಂಬದ ಬೇಬಿ ಸಾಲ್ಯಾನ್ ಅವರಿಗೆ ನೂತನ ಸುಸಜ್ಜಿತವಾದ ಆಯೋಧ್ಯ ಹೆಸರಿನಲ್ಲಿ ಮನೆ ನಿರ್ಮಾಣವನ್ನು ಮಾಡಿದ್ದು ಅದರ ಹಸ್ತಾಂತರ ಕಾರ್ಯಕ್ರಮವು ಶುಕ್ರವಾರ ನಡೆಯಿತು.
ಕಲ್ಲಡ್ಕ ಶ್ರೀ ರಾಮ ವಿದ್ಯಾಲಯದ ಸಂಚಾಲಕ ಕಲ್ಲಡ್ಕ ಪ್ರಭಾಕರ ಭಟ್ ಅವರು ನೂತನ ಮನೆಗೆ ದೀಪ‌ ಬೆಳಗಿಸಿ ಫಲಾನುಭವಿ ಬೇಬಿ ಸಾಲ್ಯಾನ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ೧೯೯೨ ಡಿಸೆಂಬರ್ ೬ ನೂರಾರು ವರ್ಷಗಳ
ಅಪಮಾನವನ್ನು ತೊಡೆದು ಹಾಕಿ, ಒಂದು ವೈಭವದ ಪ್ರತಾಪದ, ಪರಾಕ್ರಮದ ದಿನ. ಅಂತಹ ಪವಿತ್ರವಾದ ದಿನದಂದು ಹಿಂದೂ ಯುವಸೇನೆಯ ಕಾರ್ಯಕರ್ತರು ದಾನಿಗಳ ನೆರವಿನಿಂದ ಆಯೋಧ್ಯೆಯ ಹೆಸರಿನಲ್ಲಿ ಸಮಾಜಕ್ಕೆ ತನ್ನನ್ನು ತಾನು ಅರ್ಪಣೆ  ಮಾಡುವ ಮುಖಾಂತರ ಪುಣ್ಯಮಯ ಕಾರ್ಯ
ನಡೆದಿದೆ. ಕಷ್ಟ ಬಂದಾಗ ಅವರ ನೆರೆವಿಗೆ ಧಾವಿಸುವುದು ಮನುಷ್ಯ ಸಹಜ ಧರ್ಮ. ಇದು
ರಾಮರಾಜ್ಯದ ಕನಸು. ಮನೆ ಮನೆ ಅಯೋಧ್ಯ ಆಗಬೇಕು, ಮನೆ ಮನೆಗಳಲ್ಲಿ ರಾಮ, ಸೀತೆ
ಲಕ್ಷ್ಮಣರಂತರವರು ಹುಟ್ಟಬೇಕು ಆವಾಗ ಮಾತ್ರ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂದರು.
 ಶಾಸಕ ಕೆ. ರಘುಪತಿ ಭಟ್, ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷ ಯಶ್‌ಪಾಲ್ ಎ.
ಸುವರ್ಣ, ನಗರಸಭಾ ಸದಸ್ಯರಾದ ಲಕ್ಷ್ಮೀ ಮಂಜುನಾಥ್, ಸುಂದರ ಕಲ್ಮಾಡಿ, ವಿಜಯ ಕೊಡವೂರು,‌ ತಾ.ಪಂ. ಸದಸ್ಯ ಶರತ್ ಕುಮಾರ್ ಬಲಕರೆ, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷ ಮಂಜು ಕೊಳ, ಭಾಸ್ಕರಚಂದ್ರ ಶೆಟ್ಟಿ, ಶುಭಕರ ಶೆಟ್ಟಿ, ನಗರಾಧ್ಯಕ್ಷ ಪ್ರಭಾತ್ ಕೊಟ್ಯಾನ್, ಶಿವ ಪಂಚಾಕ್ಷರಿ ಭಜನಾ ಮಂದಿರದ ಅಧ್ಯಕ್ಷ ಜಯ ಸಾಲ್ಯಾನ್, ಕನ್ನಿ ಮೀನುಗಾರರ ಸಂಘದ ಅಧ್ಯಕ್ಷ
 ದಯಕರ ವಿ. ಸುವರ್ಣ, ಪ್ರಮುಖರಾದ ನಾಗೇಶ್ ಸಾಲ್ಯಾನ್, ರವಿ ಸಾಲ್ಯಾನ್, ಲಕ್ಷ್ಮಣ್, ನಾಗೇಶ್ ಅಮೀನ್, ರವಿ ಕರ್ಕೇರ, ಧನಂಜಯ ಕುಂದರ್, ಉದಯ ಕುಂದರ್, ಸುದೇಶ್ ಶೆಟ್ಟಿ,‌ ಶೇಖರ್ ಹಿರಿಯಡ್ಕ, ಹಿಂದೂ ಯುವಸೇನೆಯ ಪದಾಕಾರಿಗಳು ಉಪಸ್ಥಿತರಿದ್ದರು.
ಶರತ್ ಕರ್ಕೇರ ಸ್ವಾಗತಿಸಿ, ವಂದಿಸಿದರು.
ಪ್ರಾಕೃತಿಕ ವಿಕೋಪಕ್ಕಿಡಾಗಿತ್ತು ಮನೆ:
ಮಲ್ಪೆ ಕೊಳದ ಶಿವಪಂಚಾಕ್ಷರಿ ಭಜನಾ ಮಂದಿರದ ಬಳಿಯ ಬೇಬಿ ಸಾಲ್ಯಾನ್ ಅವರ ಮನೆ ಕಳೆದ ಮಳೆಗಾಲದಲ್ಲಿ ಗಾಳಿ ಮಳೆಗೆ ಸಂಪೂರ್ಣ ಕುಸಿದು ಬಿದಿದ್ದು, ಪರಿಣಾಮ ಆಶ್ರಯವಿಲ್ಲದೆ ತೀರ ಸಂಕಷ್ಟಕ್ಕೆ ಈಡಾಗಿದ್ದರು. ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದ ಕುಟುಂಬ ಮನೆ ಬೇರೆ ನಿರ್ಮಾಣಕ್ಕೆ ಅಶಕ್ತವಾಗಿತ್ತು. ಮಾನಸಿಕವಾಗಿ ನೊಂದ ಕುಟುಂಬಕ್ಕೆ ಸಾಮಾಜಿಕ ಸಂತ್ವಾನದ ಕೆಲಸವನ್ನು ಮಾಡುತ್ತಿರುವ ಹಿಂದೂ ಯುವಸೇನೆ ಉಡುಪಿ ಘಟಕ ಸುಸಜ್ಜಿತವಾದ ಮನೆಯನ್ನು ನಿರ್ಮಿಸಿಕೊಟ್ಟಿದೆ.