ಮಣಿಪಾಲ: ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ನಲ್ಲಿ 2026-27ನೇ ಸಾಲಿನ ಪ್ರವೇಶಾತಿಗಾಗಿ ಜೂನ್ 26ರಂದು (ಶುಕ್ರವಾರ) ವಿಶೇಷ ಓಪನ್ ಹೌಸ್ ಅಡ್ಮಿಷನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪಿಯುಸಿ (ವಿಜ್ಞಾನ ವಿಭಾಗ) ಹಾಗೂ ಐಟಿಐ ಉತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಎರಡು ವರ್ಷದ ಡಿಪ್ಲೊಮಾ ಕೋರ್ಸ್ಗಳಿಗೆ ನೇರವಾಗಿ ದ್ವಿತೀಯ ವರ್ಷದ ಪ್ರವೇಶ (ಲ್ಯಾಟರಲ್ ಎಂಟ್ರಿ) ನೀಡಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡೇಟಾ ವಿಭಾಗದಲ್ಲಿ ವಿವಿಧ ಆಯ್ಕೆಗಳು ಕಲ್ಪಿಸಲಾಗಿದೆ.
ಮೊದಲ ಆಯ್ಕೆಯಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡೇಟಾ ಡಿಪ್ಲೊಮಾ ಕೋರ್ಸ್ಗೆ ಪ್ರವೇಶ ಪಡೆಯಬಹುದಾಗಿದ್ದು, ಅರ್ಹ ವಿದ್ಯಾರ್ಥಿಗಳಿಗೆ ಡಾ. ಟಿ.ಎಂ.ಎ. ಪೈ ವಿದ್ಯಾರ್ಥಿವೇತನವೂ ಲಭ್ಯವಿದೆ.
ಎರಡನೇ ಆಯ್ಕೆಯಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡೇಟಾ ಕೋರ್ಸ್ ಜೊತೆಗೆ ಹೆಚ್ಚುವರಿ ವಿಶೇಷೀಕರಣವಾಗಿ ಡೇಟಾ ಸೈನ್ಸ್ ಅಥವಾ ಸೈಬರ್ ಸೆಕ್ಯುರಿಟಿ ವಿಭಾಗಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದಾಗಿದೆ.
ಈ ಕೋರ್ಸ್ನೊಂದಿಗೆ ಎಂಎಸ್ಡಿಸಿ ಕೌಶಲ್ಯ ಡಿಪ್ಲೊಮಾವನ್ನೂ ಪಡೆಯುವ ಅವಕಾಶ ಇದೆ.
ಮೂರನೇ ಆಯ್ಕೆಯಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡೇಟಾ ಡಿಪ್ಲೊಮಾ ಜೊತೆಗೆ ಆನ್ಲೈನ್ ಮೂಲಕ ಬಿಸಿಎ ಅಥವಾ ಬಿ.ವೋಕ್ ಪದವಿ ವ್ಯಾಸಂಗ ಮಾಡುವ ಅವಕಾಶ ಕಲ್ಪಿಸಲಾಗಿದ್ದು, ಶಿಕ್ಷಣ ಸಾಲ ಸೌಲಭ್ಯವೂ ಲಭ್ಯವಿದೆ.
ಇದಲ್ಲದೆ ಆಟೋಮೊಬೈಲ್, ಸಿವಿಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಮೆಕ್ಯಾನಿಕಲ್, ಮೆಕಾಟ್ರಾನಿಕ್ಸ್, ಪ್ರಿಂಟಿಂಗ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸೇರಿದಂತೆ ವಿವಿಧ ಡಿಪ್ಲೊಮಾ ವಿಭಾಗಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ನೇರ ದ್ವಿತೀಯ ವರ್ಷದ ಪ್ರವೇಶ ನೀಡಲಾಗುತ್ತಿದೆ.
ಎಐಸಿಟಿಇ ಮಾನ್ಯತೆ, ಆಧುನಿಕ ಪ್ರಯೋಗಾಲಯಗಳು, ಕೈಗಾರಿಕಾ ಅಗತ್ಯಗಳಿಗೆ ತಕ್ಕ ಪಠ್ಯಕ್ರಮ, ವಸತಿ ಸೌಲಭ್ಯ ಹಾಗೂ ಉತ್ತಮ ಉದ್ಯೋಗ ಮಾರ್ಗದರ್ಶನ ಸಂಸ್ಥೆಯ ಪ್ರಮುಖ ವಿಶೇಷತೆಗಳಾಗಿವೆ. ಡಿಪ್ಲೊಮಾ ಪೂರ್ಣಗೊಳಿಸಿದ ಅರ್ಹ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ಎಂಐಟಿ ಮಣಿಪಾಲದ ದ್ವಿತೀಯ ವರ್ಷದ ಬಿ.ಟೆಕ್ಗೆ ನೇರ ಪ್ರವೇಶ ಪಡೆಯುವ ವಿಶೇಷ ಅವಕಾಶವೂ ಇದೆ.
ಸೀಮಿತ ಪ್ರವೇಶಾತಿಯಾಗಿದ್ದು ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಮಣಿಪಾಲದ ಈಶ್ವರನಗರದಲ್ಲಿರುವ ಪ್ರವೇಶ ಕಚೇರಿಯನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ 98447 29291, 94805 75730 ಹಾಗೂ 94807 32223 ಸಂಖ್ಯೆಗೆ ಕರೆ ಮಾಡಬಹುದು.

















