ಕಾರ್ಕಳ: ಕರ್ನಾಟಕ ಸರಕಾರದ ಕರಾವಳಿ ರಂಗಾಯಣಕಾರ್ಕಳ ತಾನು ಸಿದ್ಧಪಡಿಸುವ ನಾಟಕಗಳು ಹಾಗೂ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು 3 ಜನ ತಂತ್ರಜ್ಞರು (ಸಂಗೀತ/ಧ್ವನಿ ಸಂಯೋಜಕರು-1, ಬೆಳಕಿನ ವಿನ್ಯಾಸ-1, ರಂಗಸಜ್ಜಿಕೆ-ಪರಿಕರ-1) ಹಾಗೂ 12 ಮಂದಿ ಕಲಾವಿದರನ್ನು ಆಯ್ಕೆ, ಮಾಡಿಕೊಳ್ಳಲು ತೀರ್ಮಾನಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15.07.2026. ರಂಗಭೂಮಿಯಲ್ಲಿ ಅನುಭವವಿರುವ ಆಸಕ್ತ ಕಲಾವಿದರು ಮತ್ತು ತಂತ್ರಜ್ಞರು ಅರ್ಜಿ ಸಲ್ಲಿಸಬಹುದು.
ರಾಷ್ಟ್ರೀಯ ನಾಟಕ ಶಾಲೆಯ ಪದವಿ/ರಾಜ್ಯದ ಯಾವುದೇ ರಂಗಶಿಕ್ಷಣ ಕೇಂದ್ರದ ರಂಗಶಿಕ್ಷಣ ಪದವಿ/ಡಿಪ್ಲಮೋ/ ರಾಜ್ಯ ಸರ್ಕಾರ ಅಂಗೀಕೃತ ವಿಶ್ವವಿದ್ಯಾಲಯದಿಂದ ನಾಟಕ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರಿಗೆ ಹಾಗೂ ಆಯಾ ತಾಂತ್ರಿಕ ವಿಷಯಗಳಲ್ಲಿ (ಸಂಗೀತ, ಧ್ವನಿ-ಬೆಳಕು, ರಂಗಸಜ್ಜಿಕೆ-ಪರಿಕರ) ಪರಿಣತಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ರಂಗಭೂಮಿ ಅನುಭವ ಇರಬೇಕು.
ಆಸಕ್ತ ಕಲಾವಿದರು ಹಾಗೂ ತಂತ್ರಜ್ಞರನ್ನು ನಿಯಮಾನುಸಾರ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಕಲಾವಿದರಿಗೆ ವಯಸ್ಸಿನ ಮಿತಿ 18 ರಿಂದ 32 ವರ್ಷ, ತಂತ್ರಜ್ಞರಿಗೆ ವಯಸ್ಸಿನ ಮಿತಿ ಇರುವುದಿಲ್ಲ. ಆಸಕ್ತ ಕಲಾವಿದರು ಬಿಳಿ ಹಾಳೆಯ ಮೇಲೆ ಸ್ವವಿವರದೊಂದಿಗೆ ದಿನಾಂಕ 15.07.2025 ಸಂಜೆ 5.00 ಗಂಟೆಯೊಳಗೆ ವಿಶೇಷ ಕರ್ತವ್ಯಾಧಿಕಾರಿ, ಕರಾವಳಿ ರಂಗಾಯಣ ಕಛೇರಿ, ಕೋಟಿ ಚೆನ್ನಯ ಥೀಂ ಪಾರ್ಕ್. ಕಸಬಾ ಗ್ರಾಮ, ಕಾರ್ಕಳ ತಾಲೂಕು – 574104, ಉಡುಪಿ ಜಿಲ್ಲೆ-ಈ ವಿಳಾಸಕ್ಕೆ ಅಂಚೆ ಅಥವಾ ಇ-ಮೇಲ್ ವಿಳಾಸ [email protected] ನಲ್ಲಿ ಅರ್ಜಿಯನ್ನು ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ 9980765355, 9900987866, 7676501443, 8123471121, 08258-200845 ಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು. ಸಂದರ್ಶನದ ದಿನಾಂಕ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
ಸಂಬಳ ಎಷ್ಟು? ಆಯ್ಕೆಯಾದ ಕಲಾವಿದರು ರಂಗಾಯಣದ ನಿಯಮ ಮತ್ತು ಷರತ್ತುಗಳಿಗೆ ಬದ್ಧರಾಗಿರಬೇಕು. ತಂತ್ರಜ್ಞರಿಗೆ ರೂ.25,000/- (ಇಪ್ಪತ್ತೈದು ಸಾವಿರ), ಮೊದಲ ವರ್ಷದ ಕಲಾವಿದರಿಗೆ ರೂ.18,000/-(ರೂಪಾಯಿ ಹದಿನೆಂಟು ಸಾವಿರ), ಎರಡನೇ ವರ್ಷದ ಕಲಾವಿದರಿಗೆ (ರಾಷ್ಟ್ರೀಯ ನಾಟಕ ಶಾಲೆ, ಇತರೆ ರಂಗಾಯಣ, ರಂಗಶಿಕ್ಷಣ ಕೇಂದ್ರದಲ್ಲಿ ತಿರುಗಾಟ ಅನುಭವ ಇರುವ ಕಲಾವಿದರು) ಮಾಸಿಕ ಗೌರವ ಸಂಭಾವನೆ ರೂ.20,000/- (ರೂಪಾಯಿ ಇಪ್ಪತ್ತು ಸಾವಿರ ) ನೀಡಲಾಗುವುದು. ಎಂದು ಕರಾವಳಿ ರಂಗಾಯಣದ ಪ್ರಕಟಣೆ ತಿಳಿಸಿದೆ.
ಸಂದರ್ಶನ ವೇಳೆ ಹಾಜರುಪಡಿಸಬೇಕಾದ ಮೂಲ ದಾಖಲಾತಿಗಳು:
1. ಜನ್ಮ ದಿನಾಂಕ ದೃಢೀಕರಣ ಪತ್ರ
2. ಎನ್.ಎಸ್.ಡಿ / ಡಿಪ್ಲೊಮೋ ಪ್ರಮಾಣ ಪತ್ರ
3. ರಂಗಶಿಕ್ಷಣ ಕೇಂದ್ರದ ಅನುಭವ ಪ್ರಮಾಣ ಪತ್ರ
4. ರಂಗಭೂಮಿ ಅನುಭವ ಕುರಿತು ಸ್ವವಿವರ ಪತ್ರ (ಅಗತ್ಯ ದಾಖಲೆಗಳೊಂದಿಗೆ)
5. ಆಧಾರ್ ಕಾರ್ಡ್

















