ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಯದ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮತ್ತು ಮೆಶಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳಾದ ಆಯಿಷಾ ಕಾಝಿ, ಭೂಮಿಕಾ, ಶ್ರಾವ್ಯ ಮತ್ತು ಶ್ರೇಯ ಇವರು ವಿಭಾಗದ ಪ್ರಾಧ್ಯಾಪಕರಾದ ಬಾಲಚಂದ್ರ ಆರ್ ಇವರ ಮಾರ್ಗದರ್ಶನದಲ್ಲಿ ವನ್ಯಜೀವಿ ಸಂರಕ್ಷಣೆ ಮತ್ತು ಮೇಲ್ವಿಚಾರಣೆನಡೆಸುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.
ಈ ಯೋಜನೆಯು ಕ್ಯಾಮೆರಾ ಟ್ರ್ಯಾಪ್ ಚಿತ್ರಗಳಿಂದ ಪ್ರಾಣಿಗಳನ್ನು ಸ್ವಯಂಚಾಲಿತವಾಗಿ ಗುರುತಿಸುವ ಸಾಮಥ್ರ್ಯವಿರುವ ವ್ಯವಸ್ಥೆಯನ್ನು ಒಳಗೊಂಡಿದೆ. ಈ ಯೋಜನೆ ಪರಿಸರ ಮೇಲ್ವಿಚಾರಣೆ ಮತ್ತು ಸಂರಕ್ಷಣಾ ಅಧ್ಯಯನಗಳಲ್ಲಿ ಸೃಷ್ಟಿಯಾಗುವ ಸಾವಿರಾರು ವನ್ಯಜೀವಿಗಳ ಚಿತ್ರಗಳನ್ನು ಕೈಯಾರೆ ಪ್ರಕ್ರಿಯೆಗೊಳಿಸುವ ಸವಾಲಿಗೆ ಪರಿಹಾರ ನೀಡಲು ಮಷಿನ್ ಲರ್ನಿಂಗ್ ಮತ್ತು ಡೀಪ್‍ಲರ್ನಿಂಗ್ ತಂತ್ರಜ್ಞಾನಗಳನ್ನು ಸಂಯೋಜಿಸಿದೆ.
ಈ ಯೋಜನೆಯಲ್ಲಿ ಟ್ರಾನ್ಸ್ಫರ್ ಲರ್ನಿಂಗ್ ಹಾಗೂ ಮೊಬೈಲ್ ನೆಟ್‍ವರ್ಕ್ ಆರ್ಕಿಟೆಕ್ಚರ್‍ನೊಂದಿಗೆ ಸುಧಾರಿತ ಕನ್ವಲ್ಯೂಷನಲ್ ನ್ಯೂರಲ್ ನೆಟ್‍ವರ್ಕ್‍ಅನ್ನು ಬಳಸಲಾಗಿದೆ. ಇದರಿಂದ ಕಡಿಮೆ ಬೆಳಕು, ಮಸುಕಾದ ಚಿತ್ರಗಳು ಹಾಗೂ ಭಾಗಶಃ ಕಾಣುವಂತ ಪ್ರಾಣಿಗಳಂತಹ ಪರಿಸ್ಥಿತಿಯಲ್ಲಿಯೂ ಸಹ ಹೆಚ್ಚಿನ ನಿಖರತೆಯನ್ನು ಕಾಣಬಹುದು.
ನಿಖರವಾದ ಪ್ರಭೇದ ಗುರುತಿಸುವಿಕೆಯನ್ನು ಸಾಧ್ಯವಾಗಿಸುವ ಈ ವ್ಯವಸ್ಥೆ ಜೀವ ವೈವಿಧ್ಯತೆಯ ಮೇಲ್ವಿಚಾರಣೆ ಹಾಗೂ ವನ್ಯಜೀವ ಸಂರಕ್ಷಣೆಯಲ್ಲಿ ಪರಿಸರ ವಿಜ್ಞಾನಿಗಳು ಮತ್ತು ಸಂರಕ್ಷಣೆಯಲ್ಲಿ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.

















