ಸರಕಾರಿ ಕಚೇರಿಗಳಲ್ಲಿ 10 ರೂಪಾಯಿ ಲಂಚ ಕೇಳಿದ್ರೂ ಕಾಲ್ ಮಾಡಿ ಎಂದ ಸಿಎಂ ಡಿ.ಕೆ. ಶಿವಕುಮಾರ್, ಯಾರಿಗೆ ಕಾಲ್ ಮಾಡ್ಬೇಕು ಇಲ್ಲಿದೆ ನಂಬರ್

ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಜಿಲ್ಲಾಡಳಿತವನ್ನು ಹೆಚ್ಚು ಜನಸ್ನೇಹಿ ಹಾಗೂ ಪಾರದರ್ಶಕಗೊಳಿಸುವಂತೆ ಸೂಚಿಸಿದರು.

“ಸರ್ಕಾರಿ ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ 10 ರೂಪಾಯಿ ಲಂಚ ಕೇಳಿದರೂ ತಕ್ಷಣ ದೂರು ನೀಡಿ. ಭ್ರಷ್ಟಾಚಾರಕ್ಕೆ ಅವಕಾಶ ನೀಡಬೇಡಿ” ಎಂದು ಅವರು ಹೇಳಿದರು.

ಎಲ್ಲಾ ಕಚೇರಿಗಳಲ್ಲಿ ದೂರು ಸಂಖ್ಯೆ ಫಲಕ ಕಡ್ಡಾಯ

ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ನಾಡ ಕಚೇರಿ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳಿದರೆ ಸಾರ್ವಜನಿಕರು ದೂರು ನೀಡಲು ಸಾಧ್ಯವಾಗುವಂತೆ ಸಹಾಯವಾಣಿ ಸಂಖ್ಯೆಗಳಿರುವ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಲಂಚದ ವಿರುದ್ಧ ದೂರು ನೀಡಲು ಸಹಾಯವಾಣಿಗಳು

ಕರ್ನಾಟಕ ಲೋಕಾಯುಕ್ತ ಸಹಾಯವಾಣಿ

  • 1800 425 5320
  • 080-22011298
  • 080-22375014

ಭ್ರಷ್ಟಾಚಾರ ವಿರೋಧಿ ಸಹಾಯವಾಣಿ

  • 1031

ಆನ್‌ಲೈನ್ ದೂರು ಸಲ್ಲಿಸಲು

ಜಿಲ್ಲಾವಾರು ಲೋಕಾಯುಕ್ತ ಪೊಲೀಸ್ ಸಂಪರ್ಕ ಸಂಖ್ಯೆಗಳು

ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳುವ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಮೇಲಿನ ಸಹಾಯವಾಣಿ ಸಂಖ್ಯೆಗಳ ಮೂಲಕ ಅಥವಾ ಆನ್‌ಲೈನ್ ಮೂಲಕ ದೂರು ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿದೆ.