ಉಡುಪಿ: 2026-2027 ನೇ ಸಾಲಿನಲ್ಲಿ ಕೌಶಲ್ಯಾಭಿವ್ರಧ್ಧಿ ಮತ್ತು ಉದ್ಯಮ ಶೀಲತೆ ಇಲಾಖೆಯು ರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ಐಟಿಐ ಸಂಸ್ಥೆಗಳ ಗುಣಮಟ್ಟ, ವಿದ್ಯಾರ್ಥಿಗಳ ದಾಖಲಾತಿ, ಶೈಕ್ಷಣಿಕ ಗುಣಮಟ್ಟ ಹಾಗೂ ಫಲಿತಾಂಶವನ್ನು ಪರಿಗಣಿಸಿ ಐಟಿಐ ಗ್ರೇಡಿಂಗ್ ನ ಲ್ಲಿ ನೇಶನಲ್ ಐಟಿಐ ಬಾರ್ಕೂರು ಸಂಸ್ಥೆ ತೃತೀಯ ಬಾರಿಗೆ ಉಡುಪಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದಿರುತ್ತದೆ.

ಸಂಸ್ಥೆಯನ್ನು ಮುನ್ನೆಡೆಸುವಲ್ಲಿ ಸಲಹೆ ಸಹಕಾರಗಳನ್ನು ನೀಡುತ್ತಾ ಬಂದಿರುವ ಸಂಸ್ಥೆಯ ಆಡಳಿತ ಮಂಡಳಿ, ದಿ ಬಾರ್ಕೂರು ಎಜ್ಯುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಶಾಂತಾರಾಮ ಶೆಟ್ಟಿ,ಉಪಾಧ್ಯಕ್ಷರಾದ ವಿಠ್ಠಲ ಶೆಟ್ಟಿ ಶೇಡಿಕೊಡ್ಲು, ಗೋಪಾಲ್ ನಾಯ್ಕ್, ಕಾರ್ಯದರ್ಶಿಗಳಾದ ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯ ಅಶೋಕ್ ಕುಮಾರ್ ಶೆಟ್ಟಿ, ಖಜಾಂಚಿಗಳಾದ ಎ.ಕೃಷ್ಣ ಹೆಬ್ಬಾರ್, ಆಡಳಿತ ಸಂಯೋಜಕರಾದ ನಿವೃತ್ತ ಪ್ರಾಧ್ಯಾಪಕರಾದ ಶಆರ್ಚಿಬಾಲ್ಡ್ ಪುಟಾರ್ಡೋ, ಮತ್ತು ನಮ್ಮ ಸಂಸ್ಥೆಯ ಸಂಚಾಲಕರಾದ ಬಿ.ರಾಮಚಂದ್ರ ಕಾಮತ್, ಸಂಸ್ಥೆಗೆ ಸುಸಜ್ಜಿತವಾದ ಆಟದ ಮೈದಾನ, ಆವರಣ ಗೋಡೆಯನ್ನು ಈಗಾಗಲೇ ನಿರ್ಮಿಸಿ, ಶ್ರಮಿಸುತ್ತಿರುವ “ಹಳೆ ವಿದ್ಯಾರ್ಥಿ ಸಂಘ”” ಅಧ್ಯಕ್ಷರಾದ ಮಲ್ನಾಡ್ ಕ್ಯಾಶ್ಯೋ ಇಂಡಸ್ಟ್ರೀಟ್ಸ್ ನ ಮಾಲಕ ನಾಗರಾಜ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲ ಪದಾದಿಕಾರಿಗಳಿಗೆ ಸಂಸ್ಥೆಯ ಸಂಸ್ಥೆಯ ಪ್ರಾಚಾರ್ಯರಾದ ವೆಂಕಟೇಶ್ ಕ್ರಮಧಾರಿ ಕೃತಜ್ಞತೆ ಸಲ್ಲಿಸಿದ್ದಾರೆ.

















