ಪೋದಾರ್ ಅಂತರಾಷ್ಟ್ರೀಯ ಶಾಲೆಯಲ್ಲಿ `ಯುಕ್ತಿ’ ಗಣಿತ ಥೀಮ್ ಅನಾವರಣ

ಉಡುಪಿ: ವಿದ್ಯಾರ್ಥಿಗಳಲ್ಲಿ ಗಣಿತದ ಬಗ್ಗೆ ಆಸಕ್ತಿ, ತಾರ್ಕಿಕ ಚಿಂತನೆ ಹಾಗೂ ಸಮಸ್ಯೆ ಪರಿಹಾರ ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ ಪೋದಾರ್ ಅಂತರಾಷ್ಟ್ರೀಯ ಶಾಲೆಯಲ್ಲಿ `ಯುಕ್ತಿ’ ಗಣಿತ ಥೀಮ್‍ಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಯೆಟ್ ಉಡುಪಿಯ ಪ್ರಾಂಶುಪಾಲರಾದ ಡಾ. ಅಶೋಕ ಕಾಮತ್ ಅವರು ಯುಕ್ತಿ' ಥೀಮ್ ಅನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಗಣಿತ ಶಿಕ್ಷಕಿಯರಾದ ಶ್ರೀಮತಿ ಭಾಗ್ಯಲಕ್ಷ್ಮಿ ಹಾಗೂ ಕುಮಾರಿ ದsನುಶ್ರೀ ಅವರು ಗಣಿತ ಕ್ಲಬ್ ಸದಸ್ಯರನ್ನು ಪರಿಚಯಿಸಿಯುಕ್ತಿ’ ಯೋಜನೆಯ ಉದ್ದೇಶಗಳು ಹಾಗೂ ವರ್ಷಪೂರ್ತಿ ನಡೆಯಲಿರುವ ವಿವಿಧ ಚಟುವಟಿಕೆಗಳ ಕುರಿತು ಪ್ರಸ್ತಾವಿಸಿದರು.

ಈ ಕಾರ್ಯಕ್ರಮದ ಅಂಗವಾಗಿ ಯುಕ್ತಿ ರತ್ನ' ಬ್ಯಾಡ್ಜ್ ಅನ್ನು ಬಿಡುಗಡೆಗೊಳಿಸಿದ ಮುಖ್ಯ ಅತಿಥಿ ಡಾ. ಅಶೋಕ ಕಾಮತ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿಶ್ವವಿಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜೀವನ ಸಾಧನೆಗಳು ಹಾಗೂ ಗಣಿತ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳ ಬಗ್ಗೆ ವಿವರಿಸಿದರು ಹಾಗೂ ಶಾಲೆಯು ಆಯ್ಕೆ ಮಾಡಿಕೊಂಡಿರುವಯುಕ್ತಿ’ ಥೀಮ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಸಂತಸ ಹಂಚಿಕೊಂಡರು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ನೇತ್ರಾ ಎಚ್ ಮಾತನಾಡಿ ಗಣಿತ ಅಧ್ಯಯನದಲ್ಲಿ ಶಿಸ್ತು, ನಿರಂತರ ಅಭ್ಯಾಸ ಮತ್ತು ಸರಿಯಾದ ಕಲಿಕಾ ವಿಧಾನಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪೋದಾರ್ ಪ್ರೆಪ್‍ನ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗೀತಾ ಎಲ್. ಪೂಜಾರಿ, ಶಾಲಾ ಆಡಳಿತಾಧಿಕಾರಿ ಶ್ರೀಯುತ ಹರೀಶ್ ನಾಯಕ್, ಶಿಕ್ಷಕರು ಹಾಗೂ ಶಿಕ್ಷಕೇತರವೃಂದದವರು ಉಪಸ್ಥಿತರಿದ್ದರು. ಶ್ರೀಮತಿ ಸುಪ್ರೀತಾ ಅತಿಥಿಯನ್ನು ಪರಿಚಯಿಸಿ, ಶ್ರೀಮತಿ ವಿದ್ಯಾರಾಣ ಸ್ವಾಗತಿಸಿ, ಶ್ರೀಮತಿ ಸವಿತಾ ಶೆಟ್ಟಿ ವಂದಿಸಿ, ಶ್ರೀಮತಿ ಜ್ಯೋತಿ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಡುಪಿ ಡಯೆಟ್ ಪ್ರಾಂಶುಪಾಲರಾದ ಡಾ. ಅಶೋಕ ಕಾಮತ್ ಅವರು ಭಾಗವಹಿಸಿ, ಯುಕ್ತಿ' ಥೀಮ್ ಅನ್ನು ಅಧಿಕೃತವಾಗಿ ಅನಾವರಣ ಗೊಳಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಗಣಿತ ಕ್ಲಬ್ ಸದಸ್ಯರನ್ನು ಪರಿಚಯಿಸಲಾಯಿತು ಹಾಗೂ ವಿದ್ಯಾರ್ಥಿಗಳಿಗೆಯುಕ್ತಿ ರತ್ನ’ ಬ್ಯಾಡ್ಜ್‍ಗಳನ್ನು ಬಿಡುಗಡೆಗೊಳಿಸಿ ವಿತರಿಸಲಾಯಿತು.

ವಿದ್ಯಾರ್ಥಿನಿಯರಾದ ಭಾಗ್ಯಲಕ್ಷ್ಮಿ ಹಾಗೂ ಧನುಶ್ರೀ ಅವರು `ಯುಕ್ತಿ’ ಥೀಮ್‍ನ ಮಹತ್ವ ಮತ್ತು ಉದ್ದೇಶಗಳ ಕುರಿತು ಪ್ರಸ್ತುತಿ ನೀಡಿದರು.

ಮುಖ್ಯ ಅತಿಥಿ ಡಾ. ಅಶೋಕ ಕಾಮತ್ ಅವರು ಮಾತನಾಡಿ, ಭಾರತದ ಹೆಮ್ಮೆಯ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಅಪೂರ್ವ ಸಾಧನೆಗಳನ್ನು ಸ್ಮರಿಸಿದರು. ಜೊತೆಗೆ, ವಿದ್ಯಾರ್ಥಿಗಳ ತಾರ್ಕಿಕ ಚಿಂತನೆಗೆ ಪೂರಕವಾಗಿರುವ ಶಾಲೆಯ `ಯುಕ್ತಿ’ ಥೀಮ್‍ಗೆ ತುಂಬು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಯ ಪ್ರಾಂಶುಪಾಲರು ಮಾತನಾಡಿ, ಗಣಿತ ಅಧ್ಯಯನದಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾದ ಶಿಸ್ತು ಮತ್ತು ನಿರಂತರ ಅಭ್ಯಾಸದ ಮಹತ್ವವನ್ನು ತಿಳಿಸಿಟ್ಟರು. ಕಾರ್ಯಕ್ರಮವನ್ನು ಜ್ಯೋತಿ ನಿರೂಪಿಸಿದರು. ಸುಪ್ರೀತಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾ ಸ್ವಾಗತಿಸಿದರು. ಸವಿತಾ ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳು, ಗೀತಾ, ಗಣಿತ ವಿಭಾಗದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.