ಉಡುಪಿ: ಮಹೇಶ್ ಮರ್ಣೆ ಉಡುಪಿ ಜಿಲ್ಲೆಯ ಪ್ರತಿಭಾವಂತ ಕಲಾವಿದ. ಅಶ್ವಥ ಎಲೆಯಲ್ಲಿ ಭಾವಚಿತ್ರ ಮೂಡಿಸುವುದರಲ್ಲಿ ಇವರು ಎತ್ತಿದ ಕೈ. ಅನೇಕ ಗಣ್ಯರು ಮತ್ತು ರಾಜಕೀಯ ನಾಯಕರ ಭಾವಚಿತ್ರಗಳನ್ನು ಎಲೆಯಲ್ಲಿ ಮೂಡಿಸಿ ಸೈ ಎನಿಸಿದ್ದಾರೆ.
ಇದೀಗ ನೂತನ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಅವರ ಭಾವಚಿತ್ರ ವನ್ನು ಅಶ್ವಥ ಎಲೆಯಲ್ಲಿ ರಚಿಸುವ ಮೂಲಕ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಮಹೇಶ್ ಮರ್ಣೆ ಯವರು ನೂತನ ಮುಖ್ಯಮಂತ್ರಿ ಯವರಿಗೆ ಅಭಿನಂದಿಸಿದ್ದಾರೆ. ಇದು ಕಲಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

















