ಮಣಿಪಾಲ: ಮೇಕಪ್ ಹಾಗೂ ಬ್ಯೂಟಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಮಣಿಪಾಲದ ಎಂಎಸ್‌ಡಿಸಿ ಒರೇನ್ ಇಂಟರ್‌ನ್ಯಾಷನಲ್ ವತಿಯಿಂದ ಜೂನ್ 9ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ಏರ್‌ಬ್ರಷ್ ಮೇಕಪ್ ತಂತ್ರಜ್ಞಾನದ ಕುರಿತು ವಿಶೇಷ “ಲುಕ್ ಆ್ಯಂಡ್ ಲರ್ನ್” ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
“ಕ್ಯಾಥೋಲಿಕ್ ಬ್ರೈಡ್” ಥೀಮ್‌ನಡಿ ಆಯೋಜಿಸುವ ಏರ್‌ಬ್ರಷ್ ಮೇಕಪ್ ಪ್ರದರ್ಶನ ಹಾಗೂ ತರಬೇತಿ ಕಾರ್ಯಕ್ರಮವಿದು
ಕಾರ್ಯಾಗಾರದಲ್ಲಿ ವಧುವಿನ ಮೇಕಪ್‌ಗೆ ಸಂಬಂಧಿಸಿದ ಆಧುನಿಕ ಏರ್‌ಬ್ರಷ್ ತಂತ್ರಜ್ಞಾನ, ಮೇಕಪ್ ಫಿನಿಶಿಂಗ್, ಬ್ರೈಡಲ್ ಲುಕ್ ಸೃಷ್ಟಿಸುವ ವಿಧಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು 699 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಎಂಎಸ್‌ಡಿಸಿ ಒರೇನ್ ಇಂಟರ್‌ನ್ಯಾಷನಲ್‌ನ 3ನೇ ಮಹಡಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 8123165068 ಸಂಖ್ಯೆಯನ್ನು ಸಂಪರ್ಕಿಸಬಹುದು

















