ಮಂಗಳೂರು: ಜೂನ್ ತಿಂಗಳಲ್ಲಿ ಪ್ರಯಾಣಿಕರ ಹೆಚ್ಚುತ್ತಿರುವ ದಟ್ಟಣೆಯನ್ನು ನಿಯಂತ್ರಿಸಲು ಭಾರತೀಯ ರೈಲ್ವೆ ಇಲಾಖೆ ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ನಾಲ್ಕು ವಾರಗಳ ಕಾಲ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ.
ರೈಲು ಸಂಖ್ಯೆ 07097 ಹೈದರಾಬಾದ್–ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್ಪ್ರೆಸ್ ಜೂನ್ 3ರಿಂದ 24ರವರೆಗೆ ಪ್ರತಿ ಬುಧವಾರ ಸಂಚರಿಸಲಿದ್ದು, ಹೈದರಾಬಾದ್ನಿಂದ ಬೆಳಗ್ಗೆ 4:20ಕ್ಕೆ ಹೊರಟು ಮರುದಿನ ಬೆಳಗ್ಗೆ 9:30ಕ್ಕೆ ಮಂಗಳೂರು ತಲುಪಲಿದೆ. ಮರಳಿ ರೈಲು ಸಂಖ್ಯೆ 07098 ಮಂಗಳೂರು–ಹೈದರಾಬಾದ್ ವಿಶೇಷ ಎಕ್ಸ್ಪ್ರೆಸ್ ಜೂನ್ 4ರಿಂದ 25ರವರೆಗೆ ಪ್ರತಿ ಗುರುವಾರ ರಾತ್ರಿ 8:00ಕ್ಕೆ ಮಂಗಳೂರಿನಿಂದ ಹೊರಟು ಶನಿವಾರ ಮುಂಜಾನೆ 4:00ಕ್ಕೆ ಹೈದರಾಬಾದ್ ತಲುಪಲಿದೆ.
ಒಟ್ಟು 24 ಬೋಗಿಗಳಿರುವ ಈ ರೈಲಿನಲ್ಲಿ
3 ಎಸಿ 2-ಟೈರ್,
5 ಎಸಿ 3-ಟೈರ್,
10 ಸ್ಲೀಪರ್,
4 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ
2 ಲಗೇಜ್-ಬ್ರೇಕ್
ವ್ಯಾನ್ಗಳನ್ನು ಅಳವಡಿಸಲಾಗಿದೆ. ರೈಲು ಮಂತ್ರಾಲಯಂ ರೋಡ್ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದ್ದು, ಪ್ರಯಾಣಿಕರಿಗೆ ಅನುಕೂಲಕರ ಸೇವೆ ಒದಗಿಸಲಿದೆ.
ಜೂನ್ ತಿಂಗಳಲ್ಲಿ ಪ್ರವಾಸ, ಉದ್ಯೋಗ ಹಾಗೂ ಕುಟುಂಬ ಭೇಟಿ ಉದ್ದೇಶದ ಪ್ರಯಾಣಿಕರಿಗೆ ಈ ವಿಶೇಷ ರೈಲು ಸೇವೆ ಹೆಚ್ಚಿನ ನೆರವು ನೀಡಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

















