ಮಂಗಳೂರು: ಐಡಿಯಾ ಆಫ್ ಭಾರತ್ ಎನ್ನುವ ಪರಿಕಲ್ಪನೆಯಲ್ಲಿ ಮಂಗಳೂರಿನಲ್ಲಿ ಎರಡು ದಿನಗಳ ಕಾಲ ಮಂಗಳೂರು ಲಿಟ್ ಫೆಸ್ಟ್ ಆಯೋಜಿಸಲಾಗಿದ್ದು, ನಗರದ ಟಿ.ಎಂ.ಎ ಪೈ ಸಭಾಂಗಣದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಾಹಿತ್ಯ ಹಬ್ಬದಲ್ಲಿ ಏಕಪಾತ್ರಾಭಿನಯದ ಶೈಲಿಯಲ್ಲಿ ಸಂವಾದಗಳು, ಪ್ಯಾನಲ್ ಡಿಸ್ಕಷನ್, ಪುಸ್ತಕಗಳ ವಿಮರ್ಶೆ, ನೃತ್ಯ ಪ್ರದರ್ಶನ, ಪುಸ್ತಕ ಪ್ರದರ್ಶನ, ಗೋಷ್ಠಿ, ಕ್ಲೈ ಮಾಡೆಲಿಂಗ್ ಹೀಗೆ ಹತ್ತು ಹಲವು ವಿಶೇಷತೆಗಳು ಕಾರ್ಯಕ್ರದಲ್ಲಿ ನಡೆಯಲಿದೆ. ಹಿರಿಯ ಸಂಶೋಧನ ಡಾ. ಎಂ. ಚಿದಾನಂದ ಮೂರ್ತಿ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗೌರವ ಸ್ವೀರಿಸಿ ಮಾತನಾಡಿದ ಡಾ. ಎಂ. ಚಿದಾನಂದಮೂರ್ತಿ ರಾಜ್ಯ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿದ್ದು ಬಹಳ ಒಳ್ಳೆ ವಿಚಾರ. ಟಿಪ್ಪುವನ್ನ ವೈಭವೀಕರಿಸುವರು ತಮ್ಮನ್ನ ತಾವು ವೈಭವೀಕರಿಸಿಕೊಳ್ಳಲು ಮಾಡಿದ ಹುನ್ನಾರ ಎಂದು ಹೇಳಿದರು.
ಸಾಹಿತ್ಯ ಹಬ್ಬದಲ್ಲಿ ವಿದ್ಯಾರ್ಥಿಗಳು, ಯುವಕರು, ಉದ್ಯೋಗಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.