ಉಡುಪಿಯ ವಿದುಷಿ ದೀಕ್ಷಾ ರಾಮಕೃಷ್ಣ ಇವರು ಬೆಂಗಳೂರು ದೂರದರ್ಶನ ಕೇಂದ್ರದ ಆಯ್ಕೆ ಪ್ರಕ್ರಿಯೆಯಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ “ಬಿ ” ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿತ್ತಾರೆ. ಇವರು ವಿದುಷಿ ಶ್ರೀಮತಿ ಯಶಾ ರಾಮಕೃಷ್ಣ ಮತ್ತು ಡಾ.ರಾಮಕೃಷ್ಣ ಹೆಗ್ಡೆ ಇವರ ಪುತ್ರಿ ಹಾಗೂ ಶಿಷ್ಯೆಯಾಗಿದ್ದು, ಉಡುಪಿಯ ಹೆಜ್ಜೆ-ಗೆಜ್ಜೆ(ರಿ.) ನೃತ್ಯ ಸಂಸ್ಥೆಯ ಸಹ ನಿರ್ದೇಶಕಿಯಾಗಿದ್ದಾರೆ. ಇತ್ತೀಚಿಗೆ ಪುರಂದರ ಗಾನ ನರ್ತನದ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ನಿರ್ಮಿಸಿದ್ದ ಇವರು, ನೃತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಹಲವಾರು ಸಾಧನೆಯನ್ನು ಮಾಡಿರುತ್ತಾರೆ.

















