ಉದ್ಯೋಗಾವಕಾಶ: ಮೇ 30, ಜೂ.1 ರಂದು ಸಂದರ್ಶನ


ಮಂಗಳೂರು: ವಿ.ಆರ್.ಎನ್ ಇನ್ಪೋಟೆಕ್ ಕಂಪೆನಿಯ ವತಿಯಿಂದ ಮಂಗಳೂರಿನಲ್ಲಿ ಖಾಲಿ ಇರುವ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ನೇರ ಸಂದರ್ಶನ ಮೇ 30 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ  ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.

ಸಂದರ್ಶನದಲ್ಲಿ ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಮಲಯಾಳಂ/ಹಿಂದಿ/ಇಂಗ್ಲಿಷ್/ತಮಿಳು ಭಾಷೆ ತಿಳಿದಿರಬೇಕು.

ಬ್ಲಿಂಕಿಟ್ ಕಂಪೆನಿಯ ವತಿಯಿಂದ ಮಂಗಳೂರಿನಲ್ಲಿ ಖಾಲಿ ಇರುವ ಪಿಕ್ಕರ್ ಹಾಗೂ ಪ್ಯಾಕರ್ ಹುದ್ದೆಗೆ ನೇರ ಸಂದರ್ಶನವನ್ನು ಜೂನ್  1  ರಂದು  ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಗರದ ಫಳ್ನೀರ್ ರಸ್ತೆಯ ಮೋತಿ ಮಹಲ್ ಎದುರುಗಡೆ ಇರುವ ಬ್ಲಿಂಕಿಟ್‍ನಲ್ಲಿ  ಆಯೋಜಿಸಲಾಗಿದೆ.  

ಸಂದರ್ಶನದಲ್ಲಿ ಪಿ.ಯು.ಸಿ ವಿದ್ಯಾರ್ಹತೆ ಹೊಂದಿರುವ 18 ರಿಂದ 30 ವರ್ಷದ ಒಳಗಿನ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಕಂಪೆನಿ ವತಿಯಿಂದ ಪಿ.ಎಫ್, ಇ.ಎಸ್.ಐ, ಬೋನಸ್ ಸೌಲಭ್ಯ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಂಗಳೂರು. ಇಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.