“ಬಟರ್ ಫ್ಲೈ ಹಾಲ್ ಚಂದ್ರನಗರದಲ್ಲಿ ಉಚಿತ ಸಮಗ್ರ ಆರೋಗ್ಯ ತಪಾಸಣಾ ಶಿಬಿರ”

ಕಾಪು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಘಟಕ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಬಟರ್ ಫ್ಲೈ ಗೆಸ್ಟ್ ಹೌಸ್ & ಪಾರ್ಟಿ ಹಾಲ್ ಚಂದ್ರನಗರ ಗ್ರಾಮ ಪಂಚಾಯತ್ ಕುತ್ಯಾರು /ಕಳತ್ತೂರು, ಅಲಯನ್ಸ್ ಕ್ಲಬ್ ಉಡುಪಿ ರಾಯಲ್, ರೋಟರಿ ಕ್ಲಬ್ ಶಿರ್ವ ಇದರ ಸಹಯೋಗದೊಂದಿಗೆ ಉಚಿತ ಸಮಗ್ರ ಆರೋಗ್ಯ ತಪಾಸಣಾ ಶಿಬಿರ ಚಂದ್ರನಗರದ ಬಟರ್ ಫ್ಲೈ ಹಾಲ್ ಸಭಾಂಗಣದಲ್ಲಿ ಸಮಾಜ ಸೇವಕರು ಬಟರ್ ಫ್ಲೈ ಪಾರ್ಟಿ ಹಾಲ್ ಮಾಲಕರಾದ ಡಾ.ಫಾರೂಕ್ ಚಂದ್ರನಗರ ಅಧ್ಯಕ್ಷತೆಯಲ್ಲಿ ನಡೆಯಿತು
ತದ ನಂತರ ಮಾತನಾಡಿದ ಸಮಾಜ ಸೇವಕರಾದ ಡಾ.ಫಾರೂಕ್, ಆರೋಗ್ಯ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆರೋಗ್ಯ ತಪಾಸಣೆ/ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ದಂತ ಆರೋಗ್ಯ ಅಧಿಕಾರಿ, ಡಾ.ಗಾಯತ್ರಿಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಹಲ್ಲುಗಳ ಶುಚಿತ್ವ ಕಾಪಾಡುವ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಶ್ರೀಮತಿ ವಸಂತಿ ಐ.ಸಿ.ಟಿ.ಸಿ ಆಪ್ತ ಸಮಾಲೋಚಕಿ ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಇವರು ಮಾತನಾಡುತ್ತ ಮಿಷನ್ ಏಡ್ಸ್ ಸುರಕ್ಷಾ ಅಭಿಯಾನ ಕಾರ್ಯಕ್ರಮದ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.
ಉಚಿತ ನೇತ್ರ ತಪಾಸಣೆ, ಮಧುಮೇಹ ರಕ್ತದೊತ್ತಡ ತಪಾಸಣೆ, ದಂತ ಆರೋಗ್ಯ ತಪಾಸಣೆ, ರಕ್ತ ಹೀನತೆ ಕಂಡುಹಿಡಿಯುವ ಪರೀಕ್ಷೆ ಶಿಬಿರದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಕುತ್ಯಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ಶೆಣೈ ,ಆರೋಗ್ಯ ರಕ್ಷಾ ಸಮಿತಿ ಕಾಪು ತಾಲೂಕು ಸದಸ್ಯರಾದ ದಿವಾಕರ.ಬಿ ಶೆಟ್ಟಿ ಕಳತ್ತೂರು,ಸಮಾಜ ಸೇವಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರು, ಸೌರ್ಯ ಟ್ರಸ್ಟ್ ವ್ಯವಸ್ಥಾಪಕರಾದ ಸುಭ್ರಮಣ್ಯ,ನೇತ್ರಾಧಿಕಾರಿ ಶ್ರೀಮತಿ ರಕ್ಷಿತಾ, ಶಿರ್ವ ರೋಟರಿ ಕ್ಲಬ್ ಸದಸ್ಯರಾದ ವಿಠ್ಠಲ್ ನಾಯ್ಕ್ ,ಏನ್.ಏನ್ ಓ ಜಿಲ್ಲಾ ಉಪಾಧ್ಯಕ್ಷರಾದ ಯು.ಎ ರಶೀದ್ ಕಾಪು, ಸಮಾಜ ಸೇವಕರಾದ ಡಾ.ಶೇಖ್ ವಹಿದ್ ಉದ್ಯಾವರ, ಶಂಶುದ್ದಿನ್ ಕರಂದಾಡಿ ,ಎಸ್.ಎ ರಝಕ್ ಚಂದ್ರನಗರ ಹಾಗೂ ಕಳತ್ತೂರು ಕುತ್ಯಾರು ವಿಭಾಗದ ಆಶಾ ಕಾರ್ಯಕರ್ತೆಯರು ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಮುದಾಯ ಆರೋಗ್ಯ ಅಧಿಕಾರಿ ದೀಪಿಕಾ ನಾಯಕ್ ನಿರ್ವಹಿಸಿದರು.