“ನೇಶನಲ್ ಐಟಿಐ ಹೇರಾಡಿ ಬಾರ್ಕೂರು: ಅಪ್ರೆಂಟಿಶಿಪ್ ಕ್ಯಾಂಪಸ್ ಡ್ರೈವ್”

ಬ್ರಹ್ಮಾವರ: ಬಾರ್ಕೂರು ಎಜ್ಯುಕೇಶನಲ್ ಸೊಸೈಟಿಯ ಆಡಳಿತಕ್ಕೆ ಒಳಪಟ್ಟ ಬಾರ್ಕೂರಿನ ‘ನೇಶನಲ್ ಐಟಿಐ ಕಾಲೇಜ್’ನಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪೆನಿಯಿಂದ ಅಪ್ರೆಂಟಿಷಿಪ್ ಕ್ಯಾಂಪಸ್ ಡ್ರೈವ್ ಮೇ.18 ರಂದು ನಡೆಯಿತು.

ಟಿ.ಕೆ.ಎಂ.ನ ಡೆಪ್ಯುಟಿ ಮೆನೇಜರ್ ಕಿರಣ್ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ‌ ಸುರೇಶ್ ಕಂಪೆನಿಯ‌ ಬಗ್ಗೆ ಸುವಿಸ್ತಾರ ಮಾಹಿತಿ ನೀಡಿದರು. ಅಸಿಸ್ಟೆಂಟ್ ಮೆನೇಜರ್ ಗಳಾದ ಸೂರ್ಯನಾರಾಯಣ್, ಶ್ರೀಕಾಂತ್, ಟೀಂ ಲೀಡರ್ ಮಂಜುನಾಥ್, ಮಾನವ ಸಂಪನ್ಮೂಲ ಅಧಿಕಾರಿ ಪ್ರದೀಪ್ ಭಾಗವಹಿಸಿದ್ದರು.

ಸಂಸ್ಥೆಯ ಸಂಚಾಲಕ ಬಿ.ರಾಮಚಂದ್ರ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ‌ ಪ್ರಾಂಶುಪಾಲ ವೆಂಕಟೇಶ್ ಕ್ರಮಧಾರಿ ಸ್ವಾಗತಿಸಿದರು. ತರಬೇತಿ ಅಧಿಕಾರಿ ಭಾಸ್ಕರ್ ಉಪಾಧ್ಯ ವಂದಿಸಿದರು. ಉಪನ್ಯಾಸಕ ಮಂಜುನಾಥ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

ಸಂಸ್ಥೆಯ ಕಛೇರಿ ಸಿಬ್ಬಂದಿ ಹರೀಶ್ ಹೆಬ್ಬಾರ್ ಪ್ರಾರ್ಥನೆ ಮಾಡಿದರು. ಉಡುಪಿ ಜಿಲ್ಲೆಯ ಅನುದಾನಿತ, ಸರಕಾರಿ ಐಟಿಐ ಗಳ ಅಟೋಮೊಬೈಲ್, ಎಲೆಕ್ಟ್ರೀಷಿಯನ್, ಫಿಟ್ಟರ್( ಜನರಲ್ ಮೆಕಾನಿಕ್), ಎಲೆಕ್ಟ್ರಾನಿಕ್ಸ್ ಮೆಕಾನಿಕ್, ವೆಲ್ಡರ್ ವಿಭಾಗದ ಒಟ್ಟು 237 ವಿದ್ಯಾರ್ಥಿಗಳು ಭಾಗವಹಿಸಿ,171 ವಿದ್ಯಾರ್ಥಿಗಳು ಆಯ್ಕೆಯಾದರು. ನಮ್ಮ ಸಂಸ್ಥೆಯ 102 ವಿದ್ಯಾರ್ಥಿಗಳು ಭಾಗವಹಿಸಿ 80 ವಿದ್ಯಾರ್ಥಿಗಳು ಆಯ್ಕೆಯಾದರು.