ಕುಂದಾಪುರ: ಬಹು ಸುದೀರ್ಘ ಕಾಲ ಹೈಸ್ಕೂಲು ಶಿಕ್ಷಕರಾಗಿ ಕುಂದಾಪುರ ತಾಲೂಕಿನ ವಿವಿಧ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ಅನಂತರದಲ್ಲಿ ಕುಂದಾಪುರ ತಾಲ್ಲೂಕು ಶಿಕ್ಷಣಾಧಿಕಾರಿಯಾಗಿ ಅನುಪಮ ಸೇವೆ ಸಲ್ಲಿಸಿ ಅಪಾರ ಜನಮನ್ನಣೆ ಗಳಿಸಿರುವ ಕೊಕ್ಕಣೆ೯ ಬಂಡ್ಸಾಲೆ ಮನೆ ರಾಜೀವ್ ಶೆಟ್ಟಿಯವರು (95) ಆಸೇೂಡಿನ ತಮ್ಮ ಸ್ವಗೃಹ ಮೇ.22ರಂದು ನಿಧನರಾಗಿದ್ದಾರೆ.
ಕೊಕ್ಕಣೆ೯ ರಾಜೀವ್ ಶೆಟ್ಟಿಯವರು ಉಡುಪಿ ಎಂಜಿಎಂ.ಕಾಲೇಜಿನ ಪ್ರಥಮ ಬ್ಯಾಚ್ ವಿದ್ಯಾರ್ಥಿಯಾಗಿ ಕಾಲೇಜಿನ ಸಂಸ್ಥಾಪಕರಾದ ಡಾ.ಮಾಧವ ಪೈಗಳ ಪ್ರೀತಿಗೂ ಪಾತ್ರರಾದವರು.ದಿ.ಟಿ.ಮೇೂಹನದಾಸ್ ಪೈ;ನಾಗಲ್ಯಾಂಡ್ ಮಾಜಿ ರಾಜ್ಯಪಾಲ ದಿ.ಪಿ.ಬಿ.ಆಚಾರ್ಯ ಪ್ರೊ.ಶ್ರೀಶ ಬಲ್ಲಾಳ್ ರಂತಹ ಹಿರಿಯರ ಜೊತೆ ಎಂಜಿಎಂ.ಕಾಲೇಜಿನಲ್ಲಿ ಒಟ್ಟಿಗೆ ಕಲಿತ ಹೆಗ್ಗಳಿಕೆಗೆ ಇವರಿಗೆ ಸಲ್ಲುತ್ತದೆ.ರಾಜೀವ್ ಶೆಟ್ಟಿಯವರ ನಿಧನದಿಂದಾಗಿ ಎಂಜಿಎಂ. ಕಾಲೇಜಿನ ಪ್ರಥಮ ಬ್ಯಾಚಿನ ಕೊಂಡಿ ಸಂಪೂರ್ಣವಾಗಿ ಕಳಚಿಕೊಂಡಿದೆ.ಕಳೆದ ಕಾಲೇಜಿನ ಅಮೃತ ಮಹೇೂತ್ಸವ ಸಂದರ್ಭದಲ್ಲಿ ರಾಜೀವ್ ಶೆಟ್ಟಿಯವರ ಕುರಿತಾಗಿ ವಿಶೇಷ ಲೇಖನ ಉದಯವಾಣಿಯಲ್ಲಿ ಪ್ರಕಟವಾಗಿತ್ತು. ದಿವಂಗತ ಕೊಕ್ಕಣೆ೯ ರಾಜೀವ್ ಶೆಟ್ಟಿಯವರು ಇಬ್ಬರು ಪುತ್ರರು ಓವ೯ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.ಇವರ ಹಿರಿಯ ಪುತ್ರ ಡಾ.ಅನಿಲ್ ಕುಮಾರ್ ಶೆಟ್ಟಿಯವರು ಕೆ.ಎಂ.ಎಫ್ ನಲ್ಲಿ ಹಿರಿಯ ಪಶು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಇವರ ಅಂತ್ಯ ಕ್ರಿಯೆ ನಾಳೆ 23ರಂದು ಬೆಳಿಗ್ಗೆ ಕುಂದಾಪುರ ಆಸೇೂಡಿನಲ್ಲಿ ನಡೆಯಲ್ಲಿದೆ.

















