ಜಾಸ್ತಿಯಾಗುತ್ತಿದೆ ಡೇಂಜರಸ್ ಪೇಪರ್ ಲೋಟಗಳ ಬಳಕೆ: ನೀವು ಇದರಲ್ಲೇ ಟೀ, ಕಾಫಿ ನೀರು ಕುಡಿತಾ ಹೋದ್ರೆ ಮುಗೀತು ನಿಮ್ಮ ಕತೆ!

ಏನು ಹೇಳುತ್ತಿದೆ ವರದಿ:

ಬಿಸಿ ಚಹಾ ಅಥವಾ ಕಾಫಿ ಕುಡಿಯಲು ಬಳಸುವ ಪ್ಲಾಸ್ಟಿಕ್, ಪೇಪರ್ ಮತ್ತು ಥರ್ಮೊಕೋಲ್ ಕಪ್‌ಗಳ ಬಗ್ಗೆ ಆರೋಗ್ಯ ಹಾಗೂ ಪರಿಸರದ ದೃಷ್ಟಿಯಿಂದ ಹಲವು ಅಧ್ಯಯನಗಳು ಎಚ್ಚರಿಕೆ ನೀಡಿವೆ. ವಿಶೇಷವಾಗಿ ಬಿಸಿ ಪಾನೀಯಗಳನ್ನು ಇವುಗಳಲ್ಲಿ ಹಾಕಿದಾಗ ಕೆಲವು ರಾಸಾಯನಿಕ ಅಂಶಗಳು ಪಾನೀಯಕ್ಕೆ ಮಿಶ್ರಣವಾಗುತ್ತಿದೆ. ಇದೇ ಸಮಸ್ಯೆಗೆ ಮೂಲ ಕಾರಣ ಎಂದು ವರದಿ ಹೇಳಿದೆ.

ಕೆಲವು ಬಿಸಾಡಬಹುದಾದ ಪೇಪರ್ ಕಪ್‌ಗಳು ನೀರು ಮತ್ತು ಮಣ್ಣಿಗೆ ಹಾನಿಕಾರಕ ರಾಸಾಯನಿಕಗಳನ್ನು ಕೂಡ ಬಿಡುಗಡೆ ಮಾಡುತ್ತದೆ.. ಅನೇಕ ಪೇಪರ್ ಕಪ್‌ಗಳ ಒಳಭಾಗದಲ್ಲಿ ನೀರು ಸೋರದಂತೆ ಪ್ಲಾಸ್ಟಿಕ್ ಅಥವಾ ರಾಸಾಯನಿಕ ಲೇಪನ ಮಾಡಲಾಗುತ್ತಿದೆ ಇದರಷ್ಟು ದೊಡ್ಡ ಅಪಾಯ ಬೇರೆ ಇಲ್ಲ.

ಪ್ಲಾಸ್ಟಿಕ್ ಕಪ್‌ಗಳಲ್ಲಿ ಬಿಸಿ ಚಹಾ ಅಥವಾ ಕಾಫಿ ಹಾಕಿದಾಗ ಮೈಕ್ರೋಪ್ಲಾಸ್ಟಿಕ್ ಮತ್ತು ಕೆಲವು ರಾಸಾಯನಿಕ ಅಂಶಗಳು ಪಾನೀಯಕ್ಕೆ ಸೇರುತ್ತದೆ. ದೀರ್ಘಕಾಲ ಇಂತಹ ವಸ್ತುಗಳ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದರೆ “ಪ್ಲಾಸ್ಟಿಕ್ ಕಪ್ ಬಳಕೆಯಿಂದ ನೇರವಾಗಿ ಬಾಯಿ ಕ್ಯಾನ್ಸರ್ ಉಂಟಾಗುತ್ತದೆ” ಎನ್ನುವುದರ ಬಗೆಗೂ ಅಧ್ಯಯನ ನಡೆಯುತ್ತಿದೆ.

ಥರ್ಮೊಕೋಲ್ ಕಪ್‌ಗಳಲ್ಲಿಯೂ ಹೆಚ್ಚಿನ ಉಷ್ಣತೆಗೆ ಕೆಲವು ರಾಸಾಯನಿಕಗಳು ಹೊರಬರುತ್ತದೆ. ಇದರಿಂದ ಕೆಲವರಿಗೆ ಅಲರ್ಜಿ, ಚರ್ಮದ ತೊಂದರೆ ಅಥವಾ ಹೊಟ್ಟೆ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಹೀಗೆ ತಪ್ಪದೇ ಮಾಡಿ:

  • ಬಿಸಿ ಪಾನೀಯಗಳಿಗೆ ಸ್ಟೀಲ್, ಗಾಜು ಅಥವಾ ಮಣ್ಣಿನ ಪಾತ್ರೆಗಳು ಹೆಚ್ಚು ಸುರಕ್ಷಿತ.ಹಾಗಾಗಿ ಇದನ್ನೇ ಬಳಸಿ, ಕ್ಯಾರಿ ಮಾಡಬಹುದಾದ ಪುಟ್ಟ ಸ್ಟೀಲ್ ಲೋಟಗಳು ಆನ್ ಲೈನ್ ನಲ್ಲಿ ಸಿಗುತ್ತದೆ. ನಿಮ್ಮ ಆರೋಗ್ಯಕ್ಕಾಗಿ ಅದನ್ನು ಬಳಸಿ
  • ನೀವು ಕಾರ್ಯಕ್ರಮ ಆಯೋಜಕರಾಗಿದ್ದರೆ ಯಾವುದೇ ಕಾರ್ಯಕ್ರಮದಲ್ಲಿ ಸ್ಟೀಲ್ ಲೋಟಗಳನ್ನೇ ಜನರಿಗೆ ನೀಡಿ. ಪೇಪರ್ ಲೋಟ ನೀಡಿ ಸಮಾಜದ ಕ್ಷೇಮ ಹಾಳಾಗಲು ದಾರಿಮಾಡಿಕೊಡಬೇಡಿ.
  • ಒಮ್ಮೆ ಬಳಸಿ ಬಿಸಾಡುವ ಕಪ್‌ಗಳ ಬಳಕೆಯನ್ನು ಕಡಿಮೆ ಮಾಡಿ
  • ಆಫೀಸಿಗೆ, ಶಾಲೆ, ಕಾಲೇಜುಗಳೀಗೆ ಸ್ಟೀಲ್ ಬಾಟಲಿಯಲ್ಲೇ ನೀರು ಕೊಂಡೊಯ್ಯಿರಿ.