ಪುನೀತ್ ಬೇಕಲ್ ಅವರಿಗೆ ಪಿ. ಎಚ್. ಡಿ ಪದವಿ

ಉಡುಪಿ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕರಾದ ಪುನೀತ್ ಬೇಕಲ್ ಇವರು ಸೆಂಟ್ರಲ್ ಯುನಿವರ್ಸಿಟಿ ಆಫ್ ಕರ್ನಾಟಕ, ಕಲಬುರ್ಗಿ ಇಲ್ಲಿನ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಫ್ರೊಫೆಸರ್ ಡಾ. ಪ್ರಮೋದ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಆ್ಯನ್ ಎನರ್ಜಿ ಎಫೀಶಿಯಂಟ್ ಪ್ರೋಟೊಕಾಲ್ ಆ್ಯಂಡ್ ಪ್ರೋಬೆಬಿಲಿಸ್ಟಿಕ್ ಮಾಡೆಲಿಂಗ್ ಫಾರ್ ಕ್ವೇರಿ-
ಡ್ರಿವೆನ್ ಐಒಟಿ- ಬೇಸ್ಡ್ ವೈರ್ ಲೆಸ್ ಸೆನ್ಸರ್ ನೆಟ್‌ವರ್ಕ್ಸ್” ಎಂಬ ಸಂಶೋಧನಾ ಪ್ರಬoಧಕ್ಕೆ ಮಣಿಪಾಲ ವಿಶ್ವವಿದ್ಯಾನಿಲಯವು, ಡಾಕ್ಟರೇಟ್
ಪದವಿ ನೀಡಿ ಗೌರವಿಸಿದೆ.
ಇವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಡಾ.ರಾಧಾಕೃಷ್ಣ ಎಸ್ ಐತಾಳ್, ಸಂಸ್ಥೆಯ ಪ್ರಾಂಶುಪಾಲರಾದ ಡಾ.ನಾಗರಾಜ್ ಭಟ್ ಮತ್ತು ಸಂಸ್ಥೆಯ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.