ಸೇನೆಯ ರಹಸ್ಯ ಮಾಹಿತಿಗಳನ್ನು ಬಹಿರಂಗಪಡಿಸಿದ ಆರೋಪ, “ಧುರಂಧರ್ 2” ಸಿನಿಮಾ ವಿರುದ್ಧ ಪರಿಶೀಲನೆಗೆ ಕೋರ್ಟ್ ಆದೇಶ

ನವದೆಹಲಿ: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್ 2 ಚಿತ್ರದ ಕುರಿತು ಭದ್ರತಾ ಪಡೆಗಳ ಕಾರ್ಯಾಚರಣೆ ಸಂಬಂಧಿತ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ದೆಹಲಿ ಹೈ ಕೋರ್ಟ್ Delhi High Court ಕೇಂದ್ರ ಸರ್ಕಾರಕ್ಕೆ ಪರಿಶೀಲನೆ ನಡೆಸುವಂತೆ ಸೂಚಿಸಿದೆ.

ಸಶಸ್ತ್ರ ಸೀಮಾ ಬಲ್‌ (SSB) ಹೆಡ್ ಕಾನ್‌ಸ್ಟೆಬಲ್ ದೀಪಕ್ ಕುಮಾರ್ Deepak Kumar ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ನಡೆಸಿದ ನ್ಯಾಯಾಲಯ, ಸಿನಿಮಾ ಕಾಲ್ಪನಿಕ ಕಥೆಯಾಗಿರಬಹುದು. ಆದರೆ ಭದ್ರತಾ ಪಡೆ ಸಿಬ್ಬಂದಿ ವ್ಯಕ್ತಪಡಿಸಿರುವ ಆತಂಕಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅರ್ಜಿಯಲ್ಲಿ ,ಧುರಂಧರ್- Dhurandhar: The Revenge ಚಿತ್ರವು ಸಶಸ್ತ್ರ ಪಡೆಗಳ ಕಾರ್ಯಾಚರಣೆ ಕುರಿತ ಮಾಹಿತಿಯನ್ನು ಬಿಚ್ಚಿಟ್ಟಿದ್ದು, ಇದರಿಂದ ದೇಶದ ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಚಿತ್ರವು Official Secrets Act ನಿಯಮಗಳನ್ನು ಉಲ್ಲಂಘಿಸಿರುವುದೇ ಎಂಬುದನ್ನು ಪರಿಶೀಲಿಸುವಂತೆ ನ್ಯಾಯಾಲಯವು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂಸಿಬಿಎಫ್‌ಸಿಗೆ  ಗೆ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ದೇವೆಂದ್ರ ಕುಮಾರ್ ಉಪಾಧ್ಯಾಯ Devendra Kumar Upadhyaya ಮತ್ತು ನ್ಯಾಯಮೂರ್ತಿ Tejas Karia ಅವರಿದ್ದ ವಿಭಾಗೀಯ ಪೀಠ, ದೀಪಕ್ ಕುಮಾರ್ ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಮತ್ತು ಸಿಬಿಎಫ್‌ಸಿಗೆ ಸೂಚಿಸಿದೆ.