ಕಟೀಲು: ಇಲ್ಲಿನ ಶ್ರೀ ದುರ್ಗಾ ಪರಮೇಶ್ವರಿ Kateel Durga Parameshwari Temple ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಕ್ಷೇತ್ರದ ಪಾವಿತ್ರ್ಯತೆ ಮತ್ತು ಶಿಸ್ತು ಕಾಪಾಡಲು ದೇವಸ್ಥಾನ ಆಡಳಿತ ಮಂಡಳಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಈ ನಿಯಮಗಳನ್ನು ಮುಂಚಿತವಾಗಿ ತಿಳಿದುಕೊಂಡು ಭೇಟಿ ನೀಡುವುದು ಒಳ್ಳೆಯದು.
ಸಂಪೂರ್ಣ ನಿಷೇಧ
- ಮೊಬೈಲ್ ಬಳಕೆ ಮತ್ತು ಛಾಯಾಗ್ರಹಣ ಸಂಪೂರ್ಣ ಬ್ಯಾನ್
- ಚರ್ಮದ ವಸ್ತುಗಳು, ಛತ್ರಿ, ಕೋಲು ಹಾಗೂ ಪ್ರಾಣಿಗಳನ್ನು ಒಳಗೆ ತರಲು ಅನುಮತಿ ಇಲ್ಲ
- ದೇವಸ್ಥಾನದ ಒಳಗೆ ಹಾಗೂ ಹೊರಭಾಗಗಳಲ್ಲಿ ಧೂಮಪಾನ, ಗುಟ್ಕಾ, ತಂಬಾಕು ಸೇವನೆ ಮತ್ತು ಉಗುಳುವುದು ನಿಷೇಧ
- ರಥಬೀದಿ ಮತ್ತು ನಂದಿನಿ ನದಿಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಕಡ್ಡಾಯ
- ಎಳನೀರು ಸೇರಿದಂತೆ ಹೊರಗಿನ ಆಹಾರ/ಪಾನೀಯ ಸೇವನೆಗೆ ಅವಕಾಶ ಇಲ್ಲ
ಉಡುಗೆ ಮತ್ತು ಆಚರಣೆ ನಿಯಮಗಳು
- ಭಾರತೀಯ ಸಾಂಪ್ರದಾಯಿಕ ಉಡುಪು ಧರಿಸಿ ಮಾತ್ರ ದೇವಸ್ಥಾನ ಪ್ರವೇಶ
- ಸ್ನಾನ ಮಾಡಿ ಶುದ್ಧತೆಯಿಂದ ಬರಬೇಕು
- ಮಾಂಸಾಹಾರ ಅಥವಾ ಮದ್ಯ ಸೇವಿಸಿ ಬಂದವರಿಗೆ ಪ್ರವೇಶವಿಲ್ಲ
- ಮೃತದೇಹದ ದರ್ಶನ ಪಡೆದಿದ್ದರೆ ಶುದ್ಧ ಸ್ನಾನವಿಲ್ಲದೆ ದೇವಸ್ಥಾನ ಪ್ರವೇಶಿಸಬಾರದು
- ತೀವ್ರ ಗಾಯಗಳಿರುವವರಿಗೆ ಪ್ರವೇಶ ನಿರ್ಬಂಧ
- ಮರಣ ಅಥವಾ ಜನನ ಸೂತಕದ ಅವಧಿಯಲ್ಲಿ ದೇವಸ್ಥಾನ ಪ್ರವೇಶ ನಿಷೇಧ
ಮಹಿಳೆಯರಿಗೆ ಸಂಬಂಧಿಸಿದ ನಿಯಮಗಳು
- ಗರ್ಭಿಣಿಯರು 7 ತಿಂಗಳ ನಂತರ ದೇವಸ್ಥಾನಕ್ಕೆ ಬಾರದಿರಲು ಸೂಚನೆ
- ಮುಟ್ಟಿನ ಅವಧಿಯ 5 ದಿನಗಳವರೆಗೆ ಮಹಿಳೆಯರಿಗೆ ಪ್ರವೇಶವಿಲ್ಲ
ಪೂಜೆ ಮತ್ತು ಪ್ರಸಾದ ಸಂಬಂಧಿತ ಸೂಚನೆಗಳು
- ಶ್ರೀ ದೇವಿಗೆ ಬಾಳೆ ಹಗ್ಗದಲ್ಲಿ ನೇಯ್ದ ಮಲ್ಲಿಗೆ ಹೂವನ್ನೇ ಅರ್ಪಿಸಬೇಕು
- ಏಕಾದಶಿ ದಿನ ವಿಶೇಷ ಪೂಜೆ ಇರುವುದಿಲ್ಲ
- ದೇವಸ್ಥಾನದೊಳಗೆ ಅನಗತ್ಯ ಮಾತುಕತೆ ತಪ್ಪಿಸಲು ಸೂಚನೆ
- ಪ್ರಸಾದ ಹೊರತುಪಡಿಸಿ ಬೇರೆ ಆಹಾರ ಸೇವನೆ ನಿಷೇಧ
- ಅಮೂಲ್ಯ ವಸ್ತುಗಳ ಜವಾಬ್ದಾರಿ ಭಕ್ತರದೇ
ದೇವಸ್ಥಾನ ಆಡಳಿತ ಮಂಡಳಿ, ಹೆಚ್ಚಿನ ಜನಸಂದಣಿಯ ದಿನಗಳಲ್ಲಿ ಅನ್ನಪ್ರಸಾದ ಹಾಗೂ ವಸತಿ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾದರೆ ಭಕ್ತರು ಸಹಕರಿಸುವಂತೆ ಮನವಿ ಮಾಡಿದೆ.

















